Friday, July 15, 2011

ಮತ್ತೆ ಓಡಲಾರಂಭಿಸಿದ ರೈಲು.

ನೆನೆಗುದಿಗೆ ಬಿದ್ದಿದ್ದ ಯೋಜನೆಗಳೆಲ್ಲಾ ಮತ್ತೆ ಚೈತನ್ಯದಿಂದ ಓಡಲಾರಂಭಿಸಿದಂತಿದೆ...


ಇದ್ದೂ ಇಲ್ಲದಂತಿದ್ದ ನನ್ನ ತವರೂರುಗಳಲ್ಲಿ ಒಂದಾದ ತಾಳಗುಪ್ಪಾ ಶಿವಮೊಗ್ಗ ಮೀಟರ್ಗೇಜ್ ರೈಲು ಸೇವೆ ಇದೀಗ ಬ್ರಾಡ್ ಗೇಜ್ ಗೆ ಪರಿವರ್ತಿತವಾಗಿ ಓಡುತ್ತಿದೆ.

ಬಹುಷಃ ನಾನು ನಾಲ್ಕನೇತರಗತಿಗೆ ಹೋಗುವ ವಯಸ್ಸಿರಬೇಕು ನಾನು ನನ್ನ ಕಾಚಾ ದೋಸ್ತ್ ಸುಹಾಸ ಆ ರೈಲಿನಲ್ಲಿ ತಾಳಗುಪ್ಪದಿಂದ ಸಾಗರದ ವರೆಗೆ ಹೋಗಿ ಪಾನಿ ಪುರಿ ತಿಂದು ಬರುತ್ತಿದ್ದೆವು...

ಮೊದಲಿಗೆ ಕೇವಲ ೨ಡಬ್ಬ ಮಾತ್ರ ಇತ್ತು. ಆದರೆ ಈಗ ಸುಮಾರು ೧೭ಡಬ್ಬಗಳಿದೆ ಆ ರೈಲಿಗೆ.

ನನ್ನ ಜೀವನ ಕೂಡಾ ಬದಲಾಗಿದೆ...

ಮನಕ್ಕೆ ಒಂದು ಮಟ್ಟಿನ ಬೇಲಿ ಇದ್ದ ವ್ಯವಸ್ಥೆಯಿಂದ ಸೀದಾ ಬಟಾಬಯಲಿಗೆ ಬಂದಿದ್ದೇನೆ..

ಹೊಸ ಗೆಳೆಯರು,ಗೆಳತಿಯರು,ಅಧ್ಯಾಪಕರು,ಅಧ್ಯಾಪಿಕೆಯರು, ಪಾರ್ಕಿಂಗ್ ನ ಅಂಕಲ್, ಆಫಿಸ್ ನ ಪ್ರಕಾಶಣ್ಣ ಪ್ರಿನ್ಸಿ ನೀತಿಶ್ರೀ...........

ಗಣೇಶಣ್ಣನ ಅಂಗಡಿ, ಪಕ್ಕದ ಬಯಲು...ಶಿಮೊಗ್ಗ ರೋಡಿನ ಮಂಗಳೂರು ಕ್ಯಾಂಟೀನ್, ಚಲುವಣ್ಣನ ಮಿರ್ಚಿ,ಓಂ ಶಾಂತಿ ಮೆಸ್ ನ ಊಟ.ವಾರಕ್ಕೆರಡು ಬಾರಿ ಸರೋವರ ವಿಹಾರ..

ವೂ ಪಾಯಿಂಟ್, ಜೋಗದ ಐ.ಬಿ.,ತಾಳಗುಪ್ಪ ಐ.ಬಿ,ಸ್ವಾಮಣ್ಣನ ಪಾನಿ ಪುರಿ, ಮಾವಿನಗುಂಡಿ ಪಿ.ಜಿ ಅಂಗಡಿಯ ಸೂಪರ್ ಮಂಡಕ್ಕಿ ಮತ್ತೆ ಬ್ರೆಡ್೦೦೦ಲೆಟ್,



ಒಟ್ಟೂ ಹೊಸ ಬಣ್ಣ ಹಚ್ಚಿ ರಂಗಸ್ಥಳಕ್ಕೆ ಇಳಿದಾಗಿದೆ.

Friday, March 11, 2011

ಜೂಜಾಟ- ಜೀವನ"ದಾಟ"

ನಾವು ಏನ್ ಮಾಡ್ತಾ ಇದ್ದೇವೆ?
ಲಕ್ಷ್ಮೀನಿವಾಸ್ ಮಿತ್ತಲ್ ಗೆ ನಮಗೆ ಹೋಲಿಸಿ ಕೊಳ್ಳಿ..
ಅವರು ಒಬ್ಬ ಅತ್ಯುತ್ತಮ ವ್ಯಾಪಾರಿ ಅವರು ಜೂಜಾಡುವುದು ದುಡ್ಡಿಟ್ಟುಕಂಡು..
ನಾವೂ ಒಂಥರಾ ಲಕ್ಷ್ಮೀ ಮಿತ್ತಲ್ ಗಳೇ ನಾವು ಜೂಜಾಡುವುದು ಸಂಬಂಧಗಳ ಬಂಧವಿಟ್ಟುಕೊಂಡು..
ಗಳಿಸೋದು ಸುಖ-ಶಾಂತಿ ಮತ್ತು ಇನ್ನೇನೇನೋ!!
ಆತ ನಿರ್ಜೀವ ವಸ್ತು ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ,
ನಾವು ಜೀವಂತವಿದೆ ಅಂದು ಕೊಂಡಿರುವ ಮನಸ್ಸನ್ನ  ಇಟ್ಟುಕೊಂಡು ವ್ಯವಹಾರ ಮಾಡುತ್ತೇವೆ..!

There is no one in the world who works only for others !

ಮೊನ್ನೆ ಚಿತ್ರ ಸಂತೆಗೆ ಹೋಗಿದ್ದೆ,
ಒಂದು ಅದ್ಭುತ ಚಿತ್ರ ಕೊಂಡುಕೊಳ್ಳುವ ಆಸೆಯಾಯಿತು ಆತ ಹೇಳಿದಷ್ಟು ಕೊಟ್ಟು ಆ ಚಿತ್ರ ತಂದೆ..
ದುಡ್ಡು-ಚಿತ್ರಗಳನ್ನ ವಿಕ್ರಯ ಮಾಡಿಕೊಂಡು ಬಂದು ನನ್ನ ಗೆಳತಿಯೊಬ್ಬಳ ಹುಟ್ಟಿದ ಹಬ್ಬದ ದಿನ ಅದನ್ನ ಕೊಟ್ತೆ.

She was really happy for that and she gave me a sweet kiss on my cheeks:)

So, ಚಿತ್ರದ ಬದಲು ನಾನು ಬೇರೆಯದ್ದನ್ನ ಪಡೆದು ಕೊಂಡಿದ್ದೆ..
Mostly ನಾನು direct ಆಗಿ ಆ ದುಡ್ಡು ಕೊಟ್ತಿದ್ದರೆ ನನಗೆ ಆಕೆ ಕೊಟ್ಟದ್ದು ಸಿಗ್ತಿರಲಿಲ್ಲವೇನೋ..
I can justify my self by saying that i added my feelings to that painting before presenting that ಅಂತ..
ಆದರೆ ನಿಜ, ನಾವು ಎಷ್ಟು ಖರ್ಚು ಮಾಡ್ತೇವೆ ಹೇಗೆ ಅದನ್ನ present ಮಾಡ್ತೇವೆ ಅನ್ನೋದರೆ ಮೇಲೆ ನಮಗೆ ಸಿಗುವ returns Depend  ಆಗಿದೆ.
ಇದು ಕೇವಲ ಒಂದು ಝಲಕ್ ಮಾತ್ರ ಈ ತರಹದ ಕೊಡು ಕೊಳ್ಳುವಿಕೆ ಪ್ರತಿಕ್ಷಣ ನಡೀತಾ ಇರುತ್ತೆ..
ಸೊ ಸ್ವಲ್ಪ ಜಾಸ್ತಿ involve ಆಗಿ ನಿಮ್ಮ ವ್ಯವಹಾರದಲ್ಲಿ ಜಾಸ್ತಿ ಲಾಭ ತೆಗಿರಿ..

All the best!!


Tuesday, March 8, 2011

ರಾಗ-ಅನುರಾಗ


ಸಂಗೀತ ಯಾಕೆ ಇಷ್ಟವಾಗುತ್ತೋ ಗೊತ್ತಿಲ್ಲ..
ಕೇವಲ ಶಬ್ಧದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಅಂತ ಹೇಳೋಣಾ ಅಂದ್ರೆ ಬೇರೆವ್ರು ಮಾತಾಡಿದ್ದು ಕಿರಿಕಿರಿ ಉಂಟು ಮಾಡೋದು ಜಾಸ್ತಿ..
ನಿಮ್ಮ ಮೂಡ್ ಅನ್ನೋದು ಎಷ್ಟೇ ಖರಾಬ್ ಆಗಿದ್ರೂ ಅದನ್ನ ಮೋಡ್ ಮಾಡೋಕೆ ಕೇವಲ ಎರಡು ಹಾಡು ಸಾಕು..
ರಾಗ ಗೊತ್ತಾಗತ್ತೋ ಇಲ್ವೋ..ಭಾವ ಅರ್ಥ ಆಗತ್ತೋ ಇಲ್ವೋ..ಆದ್ರೂ ಮನಸ್ಸಿಗೆ ನಿಮ್ಮದಿ ಮಾತ್ರ ಆಗತ್ತೆ..
ಅದು ಶುದ್ಧ ಶಾಸ್ತ್ರೀಯ ಸಂಗೀತನೇ ಆಗಿರಬಹುದು ಅಥವಾ ಪಾಶ್ಚಾತ್ಯನೇ ಆಗಿರಬಹುದು ಕೇಳುವ ಮನಸ್ಸು ಸಂಗೀತದೆಡೆಗೆ ಒಲವು ಹೊಂದಿದ್ರೆ ಸಾಕು..
.
You have to sense the beat for fraction of second, and after it will make you hear and takes you to heaven!!

Tuesday, February 22, 2011

ಭಾವಗಳ ಹೂರಣದಂತ್ಯ...?



ಮುಚ್ಚಿದ ಬಾಗಿಲಿನಾಚೆಯ ಸತ್ಯ
ಕಂಡೂ ಕಾಣದಂತಿರುತಿದೆ ನಿತ್ಯ

ದೂರಾದ ಪ್ರೀತಿಯ ಕೃತ್ಯ
ಅನುಭವಿಸಲಾಗದ ಭಾವಗಳ ನೃತ್ಯ

ಕೈಗೆಟುಕದಾ ಮಾಯೆಯು ಮಿಥ್ಯ
ಭಾವಗಳ ಹೂರಣದಂತ್ಯ......?

ಚಕಮಕಿ ಕಲ್ಲುಗಳ ಚಕಮಕಿಸುತ
ಕುಳಿತಿಹೆ ಕತ್ತಲ ಕೋಣೆಯೊಳ;

ಭಾವಗಳ ಬಣ್ಣತಿಳಿಯಲು ಸರ್ಚ್ ಲೈಟ್ ಬಳಸಲಾದೀತೆ?
ಬಂಧನದ ಬಂಧ ಅರಿಯಲು ಕತ್ತಲಿನೊಳಗೆ ಕಣೆ;
ಸುಟ್ಟೀತೆ ನನ್ನಂತರಂಗದ ಬವಣೆ??


Tuesday, January 25, 2011

ಕಾರಿರುಳೊಳಾಗಸದಿ ಚಂದ್ರಮನ ಹುಡುಕುವ ಯತ್ನ ..?

ಹೆತ್ತವರಿಗೆ ಹೆಗ್ಗಣವೂ ಮುದ್ದಂತೆ...
ಹಾಗೆ ಪ್ರೀತಿಸಿದವರಿಗೆ ಎಮ್ಮೆಯದುಕೂಡಾ   Stunning Beauty ಎಂದೆನಿಸುವುದು ಸಹಜ...

ಆದರೆ ನನ್ನಾಕೆ ಹರಿಣ ದಂತವಳು..
ಆಕೆಯ ಕಣ್ಣು ಮತ್ತುಬರಿಸುವಂಥದ್ದು...
ನಾನು ಮತ್ತೊಮ್ಮೆ ಬಿದ್ದಿದ್ದೆ...
ಆಕೆಯ ಕುದುರೆಯ ಬಾಲದಂಥಾ ಕೂದಲಿಗೆ ಮನಸೋತಿದ್ದೆ...
ಕುದುರೆಯ ಬಾಲ ಹಿಡಿದವರು ಉದ್ಧಾರವಾಗುವುದು ಕಡಿಮೆಯಂತೆ...
ಗೆದ್ದರೆ ಜಾಕ್ ಪಾಟ್..!
ನಮ್ಮಂಥ ಹುಡುಗ ಮುಂಡೆವಕ್ಕೆ ಅದೇ ಮತ್ತುಬರಿಸುವುದು...

ಅವಳೋ ಅವಳಷ್ಟು ಸುಂದರವಲ್ಲ ಮುಗ್ದೆಯೂ ಅಲ್ಲ ಆದರೆ ಕಣ್ಣಿನಲ್ಲಿ ಎಂತದೋ ಹೊಳಪು.
ಅವಳಷ್ಟು ಸುಂದರವಾಗಿರದಿದ್ದರೂ ಬ್ರಹ್ಮ ಸೃಷ್ಟಿಸುವಾಗ ಒಂದು ದಿನ ಇವಲಿಗಾಗಿಯೇ ವೇಸ್ಟ್ ಮಾಡಿ ಮಾಡಿದ್ದಂತೂ ಸುಳ್ಳಲ್ಲ.
ಅವಳು ವೆರಿ   womanly...!
 ನಾನು ಒಬ್ಬ  Womanizer..:)
ಅವಳಲ್ಲಿ ನನಗೆ ಇಷ್ಟವಾಗಿದ್ದು ಎಂದರೆ ಅವಳ ಕಷ್ಟಗಳನ್ನು ನನ್ನ ಎದೆಯ ಮೇಲೇ ಕಣ್ಣೀರಿಡುತ್ತಾ ಹಂಚಿಕೊಳ್ಳುವ ಗುಣ.
ನಾನಾದರೋ ಕತೆಯಲ್ಲ ಜೀವನದ ಜುಲಿ ಲಕ್ಹ್ಸ್ಮಿಗಿಂತ ಬೇರೆಯವರನ್ನು ಸಮಾಧಾನಮಾದುವುದರಲ್ಲಿ ಒಂದು ಕೈ ಮೇಲು.
ಹಾಗೆ ಅವಳ ಕಷ್ಟ ಹೇಳುತ್ತಾ ಹೇಳುತ್ತಾ ನನ್ನ ಹತ್ತಿರವಾಗಿ ಹೋಗಿದ್ದಳು...
ನಾನು ನನ್ನ  ಅಂತರಂಗನಾಯಕಿಯನ್ನು ಮರೆಯಲು ಪ್ರಯತ್ನಿಸುತ್ತಿದ್ದೆ..
ಮೂರು ತಿಂಗಳು  ಹಗಲು ರಾತ್ರಿ ಎನ್ನದೇ ಅವಳ ನೆನಪಲ್ಲಿ ಕೊರಗಿದೆ..
ಆಗತಾನೆ  ಕಳೆದುಹೋದ ಅವಳ ಪ್ರೀತಿಯನ್ನು ಇವಳ ಮಡಿಲಲ್ಲಿ ಕಂಡುಕೊಳ್ಳತೊಡಗಿದ್ದೆ  ಆಕೆಯನ್ನು ಮರೆಯಲು ಯತ್ನಿಸುತ್ತಿದ್ದೆ  . ಮರೆಸಿಬಿತ್ತಿದ್ದಳು ಅ೦ದರೆ ಸುಳ್ಳಾಗಲಾರದು...
ಆದರೆ ಜೀವನ ನಾವಂದು ಕೊಳ್ಳುವುದಕ್ಕಿಂತ ಹೆಚ್ಚು ತಿರುವುಗಳನ್ನು ಹೊಂದಿರುತ್ತದೆ..
ಮುಂದಾದದ್ದೇ ಬೇರೆ,
ಅವಳು ಆಗಲೇ ಒಬ್ಬನನ್ನು ಪ್ರೀತಿಸುತ್ತಿದ್ದಾಳೆ ಅವನನ್ನೇ ಮದುವೆ ಮಾಡಿಕೊಲ್ಲಲಿದ್ದಾಳೆ ಎಂದು ನನಗೆ ತಿಳಿಯಿತು.
ಆದರೂ ಎಲ್ಲೋ ಒಂದು ಆಸೆ.
ಅವಳೇ ಹುಟ್ಟಿಸಿದ್ದು.
ನಿನ್ನಷ್ಟು ಒಳ್ಳೆ ಹುಡುಗನನ್ನು ನಾನು ನೋಡಿಲ್ಲ,
ಅವನ ಕ೦ಡರೆ ನನಗೆ ಆಗುವುದೇ ಇಲ್ಲ.
ಅವನು ನನ್ನ ಚಿತ್ರಹಿಂಸೆ ಮಾಡುತ್ತಾನೆ.
ಅವನಿಂದ ಬಿಡುಗಡೆ ಸಿಕ್ಕರೆ ಸಾಕು.
ಆದರೆ ನಾನು ಅವನನ್ನೇ ಮದುವೆ ಆಗೋದು ಎಂದು ಪದೇ ಪದೇ ಹೇಳುತ್ತಿದ್ದಳು.
ಆದರೂ ನಾನು ಕನಸು ಕಟ್ಟಿಕೊಳ್ಳುವ ಹಾಗೆ ಮಾಡುತ್ತಿದ್ದಳು.
ಅ೦ಟಿಕೊ೦ಡು ಹಗಲು ಮಾಡಿದ ರಾತ್ರಿಗಲೆಷ್ಟೋ ಲೆಕ್ಕಕ್ಕೆ ಸಿಗವು.
ಆದರೆ ನಮ್ಮಿಬ್ಬರಲ್ಲಿ ಯಾವುದೇ ರೀತಿಯಾದ ಅನೈತಿಕ ಎನ್ನುವಂತ ಸಂಬಂದ ಯಾವತ್ತೂ ಇಣುಕಲಿಲ್ಲ.
ನಾನು ಅವಳಿಗೆ ಒಳ್ಳೆಯ ಸ್ನೇಹಿತನಾದೆ, ಹಿತೈಶಿಯಾದೆ, ಅತ್ತಾಗ ತ೦ಪಾದೆ, ನಕ್ಕಾಗ ಹಿಗ್ಗಿದೆ.
ಅವಳಿಗಾಗಿ ನಾನು ಮಾಡದೆ ಇರುವ ಕೆಲಸಗಳೇ ಇಲ್ಲ.
ಅದೊಂದು ರಾತ್ರಿ ಹಾಳಾದ ವಾಶಿಂಗ್ machine ಕೆಟ್ಟು ಕೂತಿತ್ತು.
ಅವಳು ಸಾವಿರ ಬಟ್ಟೆ ಹೊತ್ತುಕೊಂಡು ಬಂದಳು. machine ಗೆ ಹಾಕಿದೆ. ತಿರುಗಲಿಲ್ಲ.
ಅವಳಿಗೆ ಮೈ ಹುಷಾರಿರಲಿಲ್ಲ.
ಪಾಪ ಏನು ಮಾಡುವುದು..?  ಅವಳು ಕೆಲಸ ಮಾಡುವುದು ನನಗೆ ಇಷ್ಟವಾಗುವುದಿಲ್ಲ.
ಅವಳನ್ನು ನನ್ನ ಕೋಣೆಯಲ್ಲೇ ಮಲುಗಿಸಿ, ನಾನು ಅವಳಿಗೆ ತಿಳಿಯದ ಹಾಗೆ ಬಟ್ಟೆಯನ್ನು ಕೈಯಲ್ಲಿ ಒಗೆದಿದ್ದೆ.
ಮನೆಯಲ್ಲಿದ್ದಾಗ  ನನ್ನ ಬಿಡಿವಸ್ತ್ರವನ್ನೂ ಉಪಯೋಗಿಸಿದ ಮೇಲೆ ಮುಟ್ಟುತ್ತಿರಲಿಲ್ಲ..ಪಾಪ ಅಮ್ಮ ತೊಳೆದು ಹಾಕುತ್ತಿದ್ದಳು..
ಇನ್ನು ಹೊರಗಡೆ ಬಂದಮೇಲೆ ಹೇಗೂ ಲಾಂಡ್ರಿ,ಕೆಲಸದವಳು ಅಂತ ಅಭ್ಯಾಸ ಆಗಿತ್ತು...
ಅಮ್ಮ ತೊಳೆದು ಸ್ವಲ್ಪ ಒಣಗಿಸಲು ಹಿಂದಿ ಹಾಕು ಅಂತ ಎಷ್ಟು ಹೇಳಿದರೂ ಟಿವಿ ಎದುರಿನಿಂದ ಹಂದುತ್ತಿರಲಿಲ್ಲ...! 
ನನ್ನ ಬಟ್ಟೆಯನ್ನೇ ಎಂದು ಹಿ೦ಡಿದವನಲ್ಲ..
ಅಂದು  ಅವಳ ಬಟ್ಟೆ ಒಗೆದಿದ್ದೆ...!!!
ನನ್ನ  ನಿಜವಾದ ಪ್ರೀತಿಗೆ ಇನ್ನೊಂದು ನಿದರ್ಶನ ಬೇಕಾ..?(ಅಂತ ಅಂದುಕೊಂಡಿದ್ದೆ)
ಕಾಲು ನೋವು ಅಂದಾಗ ಕಾಲು ಒತ್ತಿದೆ, ತಲೆಗೆ ಎಣ್ಣೆ ಹಚ್ಚಿದೆ...
ನಾವು ಪರಸ್ಪರ ವಿರೋಧಿಗಳು ನಡೆಯುತ್ತಿರುವ ಕಾರ್ಯಕ್ರಮದಲ್ಲಿ..
ಆದರೆ  ಸ್ಪರ್ದೆ ಎಂಬುದನ್ನೂ ಮರೆತು ಸಹಾಯಮಾಡಿದೆ...
ನನ್ನತನವನ್ನು ನಾನು ಕಳೆದುಕೊಳ್ಳುತ್ತಿದ್ದೇನೆ ಎನ್ನುವುದನ್ನು ತಿಳಿದ ಮೇಲು ಅವಳ ಮನಸ್ಸಿಗೆ ನೋವಾಗಬಾರದು ಎಂಬ ಉದ್ದೇಶದಿಂದ ಎಲ್ಲವನ್ನೂ ಮಾಡಿದೆ.
ಬಟ್ಟೆ ಒಗೆದುಕೊಟ್ಟ ಆ ರಾತ್ರಿ ಇನ್ನೂ ನನ್ನ ಕಣ್ಣ ಮುಂದಿದೆ.
ಅವಳು ಭಾವಪರವಶಲಾಗಿದ್ದಳು ಅವಳ ಆ ಭಾವ ಸಿಹಿ ಚು೦ಬನವಾಗಿ ಮಾರ್ಪಟ್ಟಿತ್ತು.
ನೀನು ನನಗೆ ಮುಂಚೆ ಸಿಗುವುದಕ್ಕೆ ಏನಾಗಿತ್ತು?
ಬೇಸರದಲ್ಲಿ ನನ್ನ ಕಪಾಳಕ್ಕೆ ಬಾರಿಸಿದಳು ಕೂಡ.
ನಾನೇನು ಮಾಡಲಾದೀತು,
ನಮ್ಮ ತಂದೆ ತಾಯಿಗಳು ನಿನ್ನ ಊರಿನಲ್ಲಿ ಅಥವಾ ನಿನ್ನ ತಂದೆ ತಾಯಿ ನನ್ನ ಊರಿನಲ್ಲಿ ಹುಟ್ಟಲಿಲ್ಲ...
ಆದರೆ ಈಗಲೂ ಕಾಲ ಮಿಂಚಿಲ್ಲ ನಿನಗಾಗಿ ಈ ಜೀವ ಎಂದು ಕಾಯುತ್ತಿದೆ ಅವನನ್ನು ಮರೆತು ಬಾ..
ನನ್ನ ನ್ಜೀವನದ ಅಂಚಿನ ವರೆಗೂ ನಿನ್ನ ಸುಖವಾಗಿ ನೋಡಿಕೊಳ್ಳುವೆ ಎಂಬ ಭರವಸೆಯನ್ನು ಕೊಟ್ಟಿದ್ದೆ..
ಭರವಸೆಗೆ ಅವಳ ಹತಾಶೆಯ ನಗು ಉತ್ತರವಾಗಿ ಬಂದಿತ್ತು...!!!
ಆದರೂ ಆತನಿಂದ ದೂರಾಗಲು ಕಾರಣ ಇಲ್ಲವೇ...?
ಆಕೆ ಪೇಲವ ನಗೆ ನಕ್ಕು ಉತ್ತರಿಸಿದಳು..
ಅದರ ಸಾರಾಂಶ ನನ್ನ ಶಬ್ಧಗಳಲ್ಲಿ.......!
ಆಕೆಯ ಸ್ಥಿತಿ ನಿಜವಾಗಿಯೂ ರೇಸ್ ಕುದುರೆಯಂತೆಯೇ ಆಗಿತ್ತು..
ಇಷ್ಟ ವಿತ್ತೋ ಇಲ್ಲವೋ ಆಕೆಯ ಯಜಮಾನನ ಮಾತು ಕೇಳುವುದು ಅನಿವಾರ್ಯ..
ಅದು ಎಷ್ಟು ಪೆಟ್ಟು ತಿಂದರೂ ತನ್ನ ನಿಯತ್ತು ಬದಲಿಸುವಂತಿಲ್ಲ..
ಪ್ರೀತಿ ಕೇವಲ ಲಾಯದೊಳಕ್ಕೆ ಕಟ್ಟಿದಮೇಲೆ..
ಗೆದ್ದಾಗ ಹಣೆ ನೇವರಿಸುವುದು..
ಗೆಲ್ಲುವ ಮೊದಲು ಗೆಲ್ಲಲು ಮನವೊಲಿಸುವುದು...
ತನ್ನ ಲಕ್ಷ್ಯ ಬಿಟ್ಟು ಬೇರೆಡೆಗೆ ಹೊರಳುವಂತಿಲ್ಲ...
ಹೊರಳಿದರೂ ಏನು ಕಾಣದು ಆಟ ಕಟ್ಟಿದ ಗೋಡೆ ಅಡ್ಡವಾಗುತ್ತದೆ..!
ಮೇಲಿನಿಂದ ಮಹಾ ಅನುಮಾನ ಪಿಶಾಚಿ..
ಎಲ್ಲಿ ತನ್ನಿಂದ ದೂರಾಗುತ್ತಾಳೋ...ಎಂದು ಎಕ್ಸ್ಟ್ರಾ  ಕೇರ್..!!

ಅದಾಗಿ ಎರಡು ತಿಂಗಳುಗಳೇ ಕಳೆದಿವೆ,
ಆದರೆ ಆ ಸಿಹಿ ಚು೦ಬನ, ಆ ನಗು, ಅಳು, ಹೇಯ್ love u ಅಂತ ಹೇಳಿ ಬಂದು ಅಪ್ಪಿಹಾಕಿಕೊಲ್ಲುತ್ತಿದ್ದ ಅವಳ ನೆನಪು ನನ್ನ ಬಿಟ್ಟು ಹೋಗಿಲ್ಲ.
ರಾತ್ರಿಯಾದರೆ ಸಾಕು ನಿದ್ದೆ ಹತ್ತುವುದಿಲ್ಲ,
ನನ್ನ ನಿನ್ನೆಗಳ ಅವಳ ನೆನಪು ಮಾಸಲು ಇನ್ನೆಷ್ಟು ನಾಳೆಗಳು ಬೇಕೋ ನಾನರಿಯೆ.
ನನ್ನ ಅಳುವಿನ ಅ೦ಕಿತವ ತೊಡೆದವಳು ಅವಳು,
ಬಿರಿ ಬಿರಿದ ವಡಲು ಬರಿದಾದ ಮಡಿಲಿಗೆ ನೆಮ್ಮದಿಯ ಶರತ್ಕಾಲವಾಗಿ ಬ೦ದವಲು ಅವಳು.
ಅವಳು ನಗೆಯಾದರೆ ನಾನು ತುಟಿಯಂಚಿನ ಬೆಳಕಾಗುವೆ,
ಹಾಡಾದರೆ ಭಾವವಾಗುವೆ,
ಜನ್ಮವಾದರೆ ಜನ್ಮದಾಚೆಗೂ ನಾ ಜೊತೆಗಿರುವೆ.
ಈ ಹುಡುಕಾಟದಲ್ಲಿ ನಾನು ಸ೦ಪಾದಿಸಿದ್ದು ಶೂನ್ಯ ಎಲ್ಲಿಯೂ ನಾನು ನನ್ನ ಸ್ವಾರ್ಥ ತೋರಲಿಲ್ಲ.
ಪ್ರೀತಿಯ ವಿನ ಏನನ್ನು ಬೇಡಲಿಲ್ಲ.
ಎಲ್ಲವನ್ನೂ ಸಮರ್ಪಿಸಲು ಸಿದ್ದನಿದ್ದೆ.
ಆದರೆ ಅವಳಿಗಿಂತ ಸಿಹಿ ಮುತ್ತು ನೀಡಿದವಳು ನನ್ನ ಮನದನ್ನೆಯಾಗಿಹಳು.
ಅವಳೇ ನನಗೆ ಕಡೆತನಕ.
ಅವಳ ಕಣ್ಣನ್ನ ನೋಡ್ತಾ ಇದ್ರೆ ಯಾಕೋ ಗೊತ್ತಿಲ್ಲ ನನ್ನ ಕಣ್ಣು ತೇವ ಆಗ್ತಾ ಇತ್ತು,
ಈಗ ಅವಳ ನೆನಪಾದಾಗ ಆಗ್ತಾ ಇದ್ಯಲ್ಲ ಹಾಗೆ. ಅದೆಷ್ಟೋ ರಾತ್ರಿಯನ್ನ ಹಗಲು ಮಾಡಿದ್ವಿ ಒಟ್ಟಿಗೆ ಕೂತು. ಈಗಲೂ ಮಾಡ್ತಾ ಇದೀನಿ ಆದ್ರೆ ಅವಳು ಜೊತೆ ಇರಲ್ಲ.
ಅವಳ ನೆನಪು ಮಾತ್ರ ಇರತ್ತೆ. ನಡೆಯುವ ಪ್ರತಿ ಹೆಜ್ಜೆಯಲೂ ನೆನಪುಗಳು ಮುತ್ತಿಕೊಳತ್ತೆ.
ಬೇಡ ಅಂದರೂ ಕೊಳೆತ ನಿನ್ನೆಗಳು ಇಂದು, ನಾಳೆಗಳನ್ನು ಕಾಡತ್ತೆ.
ಅವಳೇ ಹಾಗೆ. ಅವಳೆಂದರೆ ಶರತನ ಅಹಂ ಅಡಗಿ ಬಾಲ ಮುದುರಿದ ಹೆಣ್ಣು ನಾಯಿಯ ತರ ಆಗಿ ಹೋಗತ್ತೆ. ಶಿಶಿರ  ಅಂದ್ರೆ ಕಾಲೇಜಿನ ಪ್ರಾಂಶುಪಾಲರು ಕೂರಿಸಿ ಮಾತಾಡಿಸ್ತಾರೆ ಆದ್ರೆ ಅವಳು ಮಾತ್ರ ನನಗೆ ಅವಾಜ್ ಹಾಕೋದು "ಹೇಯ್ ಮುಚ್ಕೊಂಡಿರೋ ಗೊತ್ತು" ಹೀಗೆ ಹೇಳಿದ ಮರು ಕ್ಷಣವೇ ನನಗೂ ನಗೂ ಅವಳಿಗೂ ನಗು, "ಕ್ಯೂಟು ಬೇಬಿ" "ಸ್ವೀಟು" "ಕಂದ" ಆದರೆ ಇನ್ನೆಲ್ಲಿಯ ಕಂದ ಆಗಲೇ ಈ ಕಂದನ ನಿದ್ರೆ ಕಸಿದುಕೊ೦ಡು ನನ್ನ ನೆನಪನ್ನೂ ಮಾಡಿಕೊಳ್ಳದೆ ನನ್ನ ಕಂದ ಆರಾಮಾಗಿ ಜೀವನ ಸಾಗಿಸುತ್ತಿದ್ದಾಳೆ.
ಅವಳಿಗೆ ನಾನು ಬರಿ ಕನಸು, ಆದರೆ ನನಗೆ ಅವಳು ನೆನಪು,
ಕನಸು, ನಿನ್ನೆ, ನಾಳೆ, ಎಲ್ಲವೂ ಅವಳೇ...
ಧೂಮಪಾನ ಮಾಡಿ ಸಿಕ್ಕಿ ಹಾಕಿಕೊ೦ಡಾಗಲು, ಅಮ್ಮ ಅಪ್ಪ ಅಕ್ಕ ನೆಂಟರು ಎಲ್ಲರೂ ಬೈದಾಗಳೂ ಇಷ್ಟು ಅತ್ತಿರದಿದ್ದ ಶಿಶಿರ  ಇವಳಿಗೋಸ್ಕರ ದಿನವಿಡೀ ಅಳುತ್ತಾನೆ ಎಂದರೆ ನೀವೇ ಲೆಕ್ಕಹಾಕಿಕೊಳ್ಳಿ.
ಅವಳ ನೆನಪು ಆಗ್ತಾ ಇದ್ರೆ ಯಾವುದೋ ಒಂದು ಕವನ ಗೀಚಿದ ಅನುಭವ ಆಗತ್ತೆ.
"ಮೇಘಗಳ ಸಾಲಿನಲ್ಲಿ ಭಾಸ್ಕರನ ಒಂಟಿಪಯಣ"..... ಹೌದು ಈಗ  ನಾನು ಒಂಟಿಯೇ.
"ನೀರೆಲೆಯ ನಾದದಲ್ಲಿ ಶಿಶಿರನ ಶೋಕಕಥನ" ಜಾರುತಿದೆ ಹಸ್ತದ ಬೆಸುಗೆ ಸರಿಯುತಿದೆ ಅಪ್ಪುಗೆ ಸಲಿಗೆ............."
ಸರಿದು ಯಾವ ಕಾಲವಾಯಿತೋ. ದರಿದ್ರದ ನೆನಪಿನ ಶಕ್ತಿ ದಿನಾಂಕ ಮರೆತುಹೊಗತ್ತೆ.
"ಕೊರಗುತಿರೋ ಹೃದಯದ ಕರೆಗೆ, ಕಣ್ಣೀರ ಕೊಡುಗೆಯ ಕ್ಷಣಕೆ, ಬರೆದುದೆಲ್ಲವೂ ಕವಿತೆ.........."
ಹೌದು ಕಣ್ಣೀರು ಎಂತವನನ್ನೂ ಕವಿಯಾಗಿಸುತ್ತದೆ, ಗೀಚುವ ಶಕ್ತಿ ಒದಗಿಸುತ್ತದೆ.
"ನ೦ಬಿಕೆಯ ಆಸರೆಯಲ್ಲೇ ಮೋಸದ ಕತ್ತಲೆ ಕದನ,ಸಂತಸದ ಬಾಳ ಪುಟದೀ ಒಲುಮೆಯ ಪದಗಳ ಹರಣ........"
ನಂಬಿದ್ದೆ ಇವಳೇ ನನ್ನ ಬಾಳ ಸಂಗಾತಿ ಆಗುತ್ತಾಳೆ. ನನ್ನ ನಾಳೆಗಳಲ್ಲಿ ಜೊತೆ ಇರುತ್ತಾಳೆ ಎಂದು.
ಆದರೆ ಸಿಕ್ಕಿದ್ದು .......!
ನೆನಪೆಂಬ ಚೂರಿಯ ಇರಿತ, ದೂರಾದ ಗೆಳತಿಯ ಸನಿಹ....!!!
ನನ್ನ ಪಾಲಿಗೆ ದೊರಕಿದ್ದು.
"ಸುರಿಸುತಿದೆ ನೋವಿನ ಮಳೆಯ, ಸಾಗದೆ ನಿಂತಿಹ ಸಮಯ,ನರಳುತಿಹ ಬರಹವೀ ಕವಿತೆ.......!
ನರಳ್ತಾ ಇರೋದು ನನ್ನ ಬರಹ ಅಲ್ಲ. ಅದು ಇನ್ನೂ ಹೆಚ್ಚಿನ ತಾಕತ್ತನ ಇತ್ತೀಚಿನ ದಿನಗಳಲ್ಲಿ ಪಡೆದಿದೆ.
ಆದರೆ ನಲುಗ್ತಾ ಇರೋದು ನನ್ನ ಮನಸು...!
"ನಲಿವುಗಳ ಬಂಧನದಲ್ಲೇ ಮರುಗುತಿದೆ ಮೌನದ ಮನನ, ಕಳೆಯುತಿರೋದಿನಗಳ ಹಿಂದೆ ಕೊಲೆಯಾದ ಕನಸಿನ ಮರ್ಮ.........!!
ಏನು ಹೇಳೊಕಾಗ್ತಿಲ್ಲ ಈ ಸಾಲಿಗೆ ನೀವು ನನಗಿಂತ ಬುದ್ದಿವಂತರು ಅರ್ಥ ಮಾಡ್ಕೊಳ್ತೀರಿ ನನ್ನ ನೋವನ್ನ ಅನ್ಕೊಂಡಿದೀನಿ.
"ಹರಟುತಿರೋ ಮನಸಿನ ನಡುವೆ ಮರೆಯಾದ ಮಾತಿನ ಭವನ, ಅವಳನ್ನು ಸೇರದೆ ಕರಗಿ ನೀರಾಗಿ ನಿಂತಿದೆ ಬದುಕು. ದುರಂತದ ಸಾಲುಗಳೇ ಈ ಕವಿತೆ.......!
ಆದ್ರೆ ಇದುಸತ್ಯ. ವಿಧಿಬರಹ ಎಂತ ಘೋರ ಪ್ರೇಮಿಗಳು ದೂರ ದೂರ ಹಸಿರಾಗೋ ಪ್ರೇಮ ಕಥೆಗೆ ಉಸಿರಾಗೋ ಜಗವು ದೂರ..!!
ಈ ಹಾಡು ನನಗಾಗಿಯೇ ಬರೆದಂತೆ ಭಾಸವಾಗುತ್ತಿದೆ..
ಕಾಯುವೆ ತೊಟ್ಟು ಮಳೆಗಾಗಿ ಕಾದು ನಿಲ್ಲುವ ರೈತನ ಹಾಗೆ. ಮಕರ೦ದಕ್ಕಾಗಿ ಶರತ್ ಕಾಲದವರೆಗೂ ಕಾಯುವ ಮರಿ ದು೦ಬಿಯ ಹಾಗೆ, ಕೆಲಸಕ್ಕೆ ಕಾಯುವ ನಿರುದ್ಯೋಗಿಯ ಹಾಗೆ. ನೋವಿನ ಅ೦ಕಿತವ ತೊಡೆದುಹಾಕಿ ಒಲವಿನ ರಕ್ಷೆಯ ನೀಡಿ ಈಗ ನೋವಿನ ದಳ್ಳುರಿಗೆ ತಳ್ಳಿರುವ ನೀನೆ ನನಗೆ ಕಡೆ ತನಕ. ಕಾಯುವೆ ಉಸಿರಿರುವತನಕ...
 
ಮೊದಲು  ಭಾರತೀಯ ಜನತಾಪಕ್ಷದ ಹಳೆ ಅಧ್ಯಕ್ಷರ ಹಾಗೆ ಮುಗುಳ್ನಕ್ಕೆ 
ನಂತರ ಕಾಂಗ್ರೆಸ್ಸ್ ಅಧ್ಯಕ್ಷೆ ಯಂತೆ ಕೈ ಆಡಿಸಿದೆ..
ನನ್ನ ಪ್ರೀತಿ ನಿನಗೆ ಜನತಾದಳದ  ಹೊರೆಯಾಗುವುದು ಬೇಡ........!

-------------------------------------------------------------------------------------------------------------------------
ಚಂದ್ರನ ತಂಪು ಹುಣ್ಣಿಮೆ ಅಮಾವಾಸ್ಯೆಗಳಲ್ಲಿ ವ್ಯತ್ಯಾಸ ವಾಗುವುದಿಲ್ಲ..   ವ್ಯತ್ಯಾಸವಾಗುವುದು ಬೆಳದಿಂಗಳು ಮಾತ್ರ...!!!
                                                                               With Love-
                                                Lover

Sunday, January 23, 2011

ರಂಗನಾಯಕಿ...!

ಕಾಮಾತುರಾನಾಂ ನ ಭಯಮ್ ನ ಲಜ್ಜಾ..!
ಸಂಸ್ಕೃತ ಜ್ನಾನದಾಯಿನಿ ಕ್ಲಾಸ್ ಮಾಡುತ್ತಿದ್ದ ಸರ್ ಹತ್ತಿರ ನಮ್ಮ ಮಾವ ಇದರ ಅರ್ಥ ಕೇಳ್ಕೊಂದು ಬರಕ್ಕೆ ಹೇಳಿದಾನೆ
ಅದರ ಅರ್ಥ ಹೇಳಿಸಾರ್ ಅಂತ ಕೇಳಿದಾಗ..
ನೋಡೋ ಅದು ಹಾಗೇ ನಿಂಗೆ ಈಗ ಹೇಳಿದರೂ ಗೊತ್ತಾಗೊಲ್ಲಾ..
ಇನ್ನೂ ಅದನ್ನೆಲ್ಲಾ ಅರ್ಥ ಮಾಡ್ಕೊಳ್ಳೋ ವಯಸ್ಸಲ್ಲ ಸುಮ್ನೆ ಬೇರೆ ಏನಾದರೂ ಸಂದೇಹ ಇದ್ರೆ ಕೇಳು...
ಇದಕ್ಕೆ ಅವರಿಗೇ ಬಂದು ಉತ್ತರ ಕೇಳ್ಕೊಳ್ಳೊಕೆ ಹೇಳೂ ಅಂತ ಭಾಷಣ ಬಿಗಿದರು.


ಈಗ್ಗೇ ೬ವರ್ಷದ ಹಿಂದೆ ನಡೆದ ಘಟನೆ ಇಂದು ಇದ್ದಕ್ಕಿದ್ದಂತೆ ನೆನಪಾಯಿತು..
ಅಂದು ಕೇಳಿ ಮರೆತು ಬಿಟ್ಟಿದ್ದ ಆ ವಾಕ್ಯ ಇಂದು ಕಿವಿಯಲ್ಲಿ ಗುಯ್ಯೆಂದು ಕೇಳಿಸುತ್ತಿದೆ........

ನಾನೂ ಕೂಡಾ ಹಾಗೆ ನಡೆದುಕೊಂದೆನಲ್ಲಾ..?
ಅಲ್ಲ ಎಲ್ಲರೂ ಹಾಗೇ ಮಾಡುವುದಂತೆ..

ಶೇಕ್ಸ್ ಪಿಯರ್ ನ ಪ್ರೀತಿ ಎಲ್ಲೂ ಇರುವುದಿಲ್ಲ..
ಕೇವಲ ಕಾದಂಬರಿ-ಕಥೆ -ಕಾವ್ಯಗಳಲ್ಲಿ ಮಾತ್ರ ಬಿದ್ದಿರುತ್ತದೆ..

 ದೈಹಿಕ ಸಾಮೀಪ್ಯ ಹೊಂದದೇ ಇರುವ ಪ್ರೇಮಿಗಳೇ ಇಲ್ಲ..
ಪ್ರೀತಿ ಎನ್ನುವ ಶಬ್ಧ ನಮ್ಮ Ego ವನ್ನು ಸಂತೋಷಪಡಿಸಲು ಮಾತ್ರ.

ಹಾಗೆಂದು ನಾನು ನನ್ನವರೊಂದಿಗೆ ದೈಹಿಕ ಸಾಮೀಪ್ಯ ಹೊದಿದ್ದಕ್ಕಾಗಿ ಇದನ್ನು ಸಮರ್ಥಿಸಿಕೊಳ್ಳುತ್ತಿಲ್ಲ...

ನಾನು ತಪಸ್ಸು ಮಾಡುತ್ತಿದ್ದ ಋಷಿಯಲ್ಲದಿದ್ದರೂ ನನ್ನ ಏಕಾಂತಕ್ಕೆ ಕಿಚ್ಚಿಟ್ಟ ರಂಗನಾಯಕಿ ಆಕೆ..

ಅವಳು ಸುಂದರ ಮುಖದ ಅದ್ಭುತ ನರ್ತಕಿ.
ನರ್ತಕಿ ಅಂದರೆ ಕಾಲೇಜು ನಾಟಕಗಳಲ್ಲಿ, 
ಆ ಡೇ ಈ ಡೇ ಗಳಲ್ಲಿ ಅದ್ಬುತವಾಗಿ ನರ್ತಿಸುತ್ತಿದ್ದಳು. ಕಣ್ಣೋ ಕೋಮಲ ಕೋಮಲ ಆಕೆಯ ಕಣ್ಣನ್ನು ನೋಡಿದಾಗ ಛಳಿಗಾಲದ ಬಾವಿಯನೆನಪಾಗುವುದು...
ಪ್ರಶಾಂತ ತಿಳಿ ತಂಪು ತಂಪಾದ ಕಂಪನ್ನು ಸೂಸುತ್ತಿತ್ತದು.. 
ನಕ್ಕರೆ ಚಿತ್ತದ ಹರಣ.....ನನ್ನದೆಯ ಸ್ವರ್ಗಕ್ಕೆ ಕಿಚ್ಚು ಹತ್ತಿಸಿ ನನ್ನ ಏಕಾಂತವನ್ನು ದಹಿಸಿದ್ದು ಅದೇ ನಗು..
ಮಾತು ವಿರಳ ಸರಳ. ನಗುವು ಭಾರತಿಯ ಜನತಾ ಪಕ್ಷದ ಹಳೆ ಅಧ್ಯಕ್ಷರ ಹಾಗೆ. 
ಮನಸು ಮುಗ್ದ ಮುಗ್ದ. 
ಮುಂಗುರುಳು ಮೋಹಕ ಮೋಹಕ. ಸರಿಯಾಗಿ ವಿವರಿಸಲು ಬಹುಷ್ಯ ಜಯಂತ ಕಾಯ್ಕಿಣಿ ಗು ಸಾಧ್ಯವಾಗಲಾರದು..
ಮನಸು ಮೊದಲ ಬಾರಿಗೆ ಬಾವಿಗೆ  ಬಿದ್ದಿದ್ದೆ ಅಲ್ಲಿ ನೋಡಿ...
ಹಾಳಾದ ಮನಸು ಸುಂದರ ಹುಡುಗೀರನ್ನ ನೋಡಿದ್ರೆ ಬಾಳ ಮುದುಡಿಕೊಂಡು ಇರತ್ತೆ ಒಳ್ಳೆ ನನ್ನ ಪ್ರೀತಿಯ ನಾಯಿ ಟಾಮಿ ತರ. ಆದ್ರೆ ಸುಂದರತೆ ಮುಗ್ದತೆ ಒಳ್ಳೆತನ ಎಲ್ಲವು ಸರಿಯಾದ ಪ್ರಮಾಣದಲ್ಲಿ ಮಿಶ್ರಿತವಾದ ಅವಳ ರೂಪು ನನ್ನ ಬರಸೆಳೆದಿತ್ತು. 
ಏಕೆ ಹೀಗಾಯ್ತೋ ನಾನು ಕಾಣೆನೋ. ಅವಳನ್ನ ನೋಡಿದಾಗಲೆಲ್ಲ ನನ್ನ ಮನಸು ಹಗುರಾಗುತ್ತಿತ್ತು.
ಚಿಕ್ಕ ವಯಸ್ಸಿಗೆ ಸಾವಿರ ಕನಸು ಸಾವಿರ ಕಸುಬು ಕಟ್ಟಿಕೊ೦ಡವನು ನಾನು. 
ಎಲ್ಲಾ ನೋವನ್ನು ಅವಳ ಕಣ್ಣು ಕೊಂದುಬಿಡುತಿತ್ತು. ಹಾಗೆ ಎಂಟು ತಿಂಗಳು ಕಳೆದೆ. 
ಮನಸ್ಸು ಎಷ್ಟು ಒತ್ತಾಯಿಸಿದರು ಅಷ್ಟು  ದಿನ ಹೇಳದೆ ನನ್ನೊಳಗೆ ಇಟ್ಟುಕೊಂಡಿದ್ದ  ನನ್ನ ಪ್ರೀತಿ ಎಂದು ನಾನು ಕರೆದು ಕೊಳ್ಳುವ ನಂದಾದೀಪದ ಬತ್ತಿಗೆ ಆಕೆಯನ್ನು  ಎಣ್ಣೆಯಾಗಿ  ಬರಮಾಡಿಕೊಳ್ಳ ಬೇಕೆಂದು ತಿರ್ಮಾನಿಸಿ ಅಂದು ಪ್ರೇಮ ಪ್ರಸ್ತಾಪ ಮಾಡಿದೆ..

ಅಂದು ಮೊಟ್ಟಮೊದಲಬಾರಿ ನಾನು ಬೇರೆಯವರ ಎದುರು ಮೊಳಕಾಲಿನ ಮೇಲೆ ನಿಂತು ಅಂಗಲಾಚಿದೆ....
ನನ್ನ ಮನದ ಕವಾಟದಲ್ಲಿ ಬಚ್ಚಿಡುವೆ..ನನ್ನ ಜೀವನದ ಪ್ರತಿ ಪುಟದಲ್ಲಿಯೂ ನೀನು ಇರುತ್ತಿಯಾ..?
ಅವಳ ಕೋಮಲ ಕಣ್ಣಿನಲ್ಲಿ ನನ್ನೂರಿನ  ಹೆಬ್ಬೆ  ಜಲಪಾತ ದುಮ್ಮಿಕ್ಕಿ ಹರಿದಿತ್ತು. 
ಇಷ್ಟು ದಿನ ನಿನಗಾಗಿ ಕಾದೆ ಆದರೆ ಮೊನ್ನೆ ಮೊನ್ನೆ ನನ್ನ ನೆಂಟರ ಹುಡುಗ ಮನೆಯವರ ಪ್ರೋತ್ಸಾಹದೊಂದಿಗೆ ಬಂದ ಒಪ್ಪಿಕೊಳ್ಳಲೇ ಬೇಕಾಯ್ತು. ನೀನಾಗಿ ಹೆಳುತ್ತಿಯ ಎನ್ನುವ ಭರವಸೆಯೇ ನನ್ನಲ್ಲಿ ಇರಲಿಲ್ಲ ಆದರೂ ಎಂತು ತಿಂಗಳು ಕಾದಿದ್ದೆ ಅಂತ ಅವಳು ಅಂದಾಗ ನಾನು ನಯಾಗರವಾಗಿದ್ದೆ.

ಅಂದು ಮೊಟ್ಟಮೊದಲಬಾರಿಗೆ ನಾನೊಂದು ವಿಷಯದಲ್ಲಿ ಸೋತಿದ್ದೆ...
ಅದು ನನ್ನ ಜೀವನದ ಮೊತ್ತಮೊದಲ ಸೋಲು...
ಯಾವತ್ತು ಯಾವ ವಿಷಯದಲ್ಲೂ ಸೋಳರಿಯದಿದ್ದ ನಾನು ಕುಗ್ಗಿಹೊಗಿದ್ದೆ...
ನನ್ನಲ್ಲಿದ್ದ ಗಾಳಿ ಖಾಲಿಯಾಗಿತ್ತು..
ಅಂದು ನನಗೆ ಏನು ಕಾಣುತ್ತಿರಲಿಲ್ಲ......!!!!!
ರಂಗನಾಯಕಿ ನನ್ನಾಸ್ಥಾನವನ್ನು ಬಿಟ್ಟು ಹೊರಟಿದ್ದಳು...!!!!!!!

ಆಯಿತು ಆಗಿ ಮೂರು ತಿಂಗಳಾಯಿತು ಆದರೂ ಮನಸು ಅಲ್ಲೇ ಸುಳಿದಾಡುತ್ತಿತ್ತು.
ಆಗ ಕೈ ಹಿಡಿದವಳೇ ಅವಳು....!


ನಿರೀಕ್ಷಿಸಿ.....ಎರಡನೇ ಹೆಣ್ಣು...


  

ಕಥೆಯಾದ ಜೀವನ..

ರಂಗನಾಯಕಿ ಚಲನಚಿತ್ರ ವೀಕ್ಷಿಸುವಾಗ ನನ್ನ ಆತ್ಮೀಯ ಗೆಳೆಯನೊಬ್ಬನ ಪ್ರೇಮ ಪುರಾಣ ನೆನಪಾಯಿತು..
ಆತನಿಗೆ ಫೋನಾಯಿಸಿ ಸ್ವಲ್ಪ ಕಿಚಾಯಿಸಿದೆ ಆಗ ಹೊರಬಿದ್ದ ಆತನ ಮನದಾಳದ ಭಾವ-ಅನುರಾಗ-ಆತನಿಗಂಟಿದ ರೋಗಗಳೊಂದಿಗೆ ಸಧ್ಯದಲ್ಲೇ ನಿಮ್ಮ ಮುಂದೆ..