ಹೆತ್ತವರಿಗೆ ಹೆಗ್ಗಣವೂ ಮುದ್ದಂತೆ...
ಹಾಗೆ ಪ್ರೀತಿಸಿದವರಿಗೆ ಎಮ್ಮೆಯದುಕೂಡಾ Stunning Beauty ಎಂದೆನಿಸುವುದು ಸಹಜ...
ಆದರೆ ನನ್ನಾಕೆ ಹರಿಣ ದಂತವಳು..
ಆಕೆಯ ಕಣ್ಣು ಮತ್ತುಬರಿಸುವಂಥದ್ದು...
ನಾನು ಮತ್ತೊಮ್ಮೆ ಬಿದ್ದಿದ್ದೆ...
ಆಕೆಯ ಕುದುರೆಯ ಬಾಲದಂಥಾ ಕೂದಲಿಗೆ ಮನಸೋತಿದ್ದೆ...
ಕುದುರೆಯ ಬಾಲ ಹಿಡಿದವರು ಉದ್ಧಾರವಾಗುವುದು ಕಡಿಮೆಯಂತೆ...
ಗೆದ್ದರೆ ಜಾಕ್ ಪಾಟ್..!
ನಮ್ಮಂಥ ಹುಡುಗ ಮುಂಡೆವಕ್ಕೆ ಅದೇ ಮತ್ತುಬರಿಸುವುದು...
ಅವಳೋ ಅವಳಷ್ಟು ಸುಂದರವಲ್ಲ ಮುಗ್ದೆಯೂ ಅಲ್ಲ ಆದರೆ ಕಣ್ಣಿನಲ್ಲಿ ಎಂತದೋ ಹೊಳಪು.
ಅವಳಷ್ಟು ಸುಂದರವಾಗಿರದಿದ್ದರೂ ಬ್ರಹ್ಮ ಸೃಷ್ಟಿಸುವಾಗ ಒಂದು ದಿನ ಇವಲಿಗಾಗಿಯೇ ವೇಸ್ಟ್ ಮಾಡಿ ಮಾಡಿದ್ದಂತೂ ಸುಳ್ಳಲ್ಲ.
ಅವಳು ವೆರಿ womanly...!
ನಾನು ಒಬ್ಬ Womanizer..:)
ಅವಳಲ್ಲಿ ನನಗೆ ಇಷ್ಟವಾಗಿದ್ದು ಎಂದರೆ ಅವಳ ಕಷ್ಟಗಳನ್ನು ನನ್ನ ಎದೆಯ ಮೇಲೇ ಕಣ್ಣೀರಿಡುತ್ತಾ ಹಂಚಿಕೊಳ್ಳುವ ಗುಣ.
ನಾನಾದರೋ ಕತೆಯಲ್ಲ ಜೀವನದ ಜುಲಿ ಲಕ್ಹ್ಸ್ಮಿಗಿಂತ ಬೇರೆಯವರನ್ನು ಸಮಾಧಾನಮಾದುವುದರಲ್ಲಿ ಒಂದು ಕೈ ಮೇಲು.
ಹಾಗೆ ಅವಳ ಕಷ್ಟ ಹೇಳುತ್ತಾ ಹೇಳುತ್ತಾ ನನ್ನ ಹತ್ತಿರವಾಗಿ ಹೋಗಿದ್ದಳು...
ನಾನು ನನ್ನ ಅಂತರಂಗನಾಯಕಿಯನ್ನು ಮರೆಯಲು ಪ್ರಯತ್ನಿಸುತ್ತಿದ್ದೆ..
ಮೂರು ತಿಂಗಳು ಹಗಲು ರಾತ್ರಿ ಎನ್ನದೇ ಅವಳ ನೆನಪಲ್ಲಿ ಕೊರಗಿದೆ..
ಆಗತಾನೆ ಕಳೆದುಹೋದ ಅವಳ ಪ್ರೀತಿಯನ್ನು ಇವಳ ಮಡಿಲಲ್ಲಿ ಕಂಡುಕೊಳ್ಳತೊಡಗಿದ್ದೆ ಆಕೆಯನ್ನು ಮರೆಯಲು ಯತ್ನಿಸುತ್ತಿದ್ದೆ . ಮರೆಸಿಬಿತ್ತಿದ್ದಳು ಅ೦ದರೆ ಸುಳ್ಳಾಗಲಾರದು...
ಆದರೆ ಜೀವನ ನಾವಂದು ಕೊಳ್ಳುವುದಕ್ಕಿಂತ ಹೆಚ್ಚು ತಿರುವುಗಳನ್ನು ಹೊಂದಿರುತ್ತದೆ..
ಮುಂದಾದದ್ದೇ ಬೇರೆ,
ಅವಳು ಆಗಲೇ ಒಬ್ಬನನ್ನು ಪ್ರೀತಿಸುತ್ತಿದ್ದಾಳೆ ಅವನನ್ನೇ ಮದುವೆ ಮಾಡಿಕೊಲ್ಲಲಿದ್ದಾಳೆ ಎಂದು ನನಗೆ ತಿಳಿಯಿತು.
ಆದರೂ ಎಲ್ಲೋ ಒಂದು ಆಸೆ.
ಅವಳೇ ಹುಟ್ಟಿಸಿದ್ದು.
ನಿನ್ನಷ್ಟು ಒಳ್ಳೆ ಹುಡುಗನನ್ನು ನಾನು ನೋಡಿಲ್ಲ,
ಅವನ ಕ೦ಡರೆ ನನಗೆ ಆಗುವುದೇ ಇಲ್ಲ.
ಅವನು ನನ್ನ ಚಿತ್ರಹಿಂಸೆ ಮಾಡುತ್ತಾನೆ.
ಅವನಿಂದ ಬಿಡುಗಡೆ ಸಿಕ್ಕರೆ ಸಾಕು.
ಆದರೆ ನಾನು ಅವನನ್ನೇ ಮದುವೆ ಆಗೋದು ಎಂದು ಪದೇ ಪದೇ ಹೇಳುತ್ತಿದ್ದಳು.
ಆದರೂ ನಾನು ಕನಸು ಕಟ್ಟಿಕೊಳ್ಳುವ ಹಾಗೆ ಮಾಡುತ್ತಿದ್ದಳು.
ಅ೦ಟಿಕೊ೦ಡು ಹಗಲು ಮಾಡಿದ ರಾತ್ರಿಗಲೆಷ್ಟೋ ಲೆಕ್ಕಕ್ಕೆ ಸಿಗವು.
ಆದರೆ ನಮ್ಮಿಬ್ಬರಲ್ಲಿ ಯಾವುದೇ ರೀತಿಯಾದ ಅನೈತಿಕ ಎನ್ನುವಂತ ಸಂಬಂದ ಯಾವತ್ತೂ ಇಣುಕಲಿಲ್ಲ.
ನಾನು ಅವಳಿಗೆ ಒಳ್ಳೆಯ ಸ್ನೇಹಿತನಾದೆ, ಹಿತೈಶಿಯಾದೆ, ಅತ್ತಾಗ ತ೦ಪಾದೆ, ನಕ್ಕಾಗ ಹಿಗ್ಗಿದೆ.
ಅವಳಿಗಾಗಿ ನಾನು ಮಾಡದೆ ಇರುವ ಕೆಲಸಗಳೇ ಇಲ್ಲ.
ಅದೊಂದು ರಾತ್ರಿ ಹಾಳಾದ ವಾಶಿಂಗ್ machine ಕೆಟ್ಟು ಕೂತಿತ್ತು.
ಅವಳು ಸಾವಿರ ಬಟ್ಟೆ ಹೊತ್ತುಕೊಂಡು ಬಂದಳು. machine ಗೆ ಹಾಕಿದೆ. ತಿರುಗಲಿಲ್ಲ.
ಅವಳಿಗೆ ಮೈ ಹುಷಾರಿರಲಿಲ್ಲ.
ಪಾಪ ಏನು ಮಾಡುವುದು..? ಅವಳು ಕೆಲಸ ಮಾಡುವುದು ನನಗೆ ಇಷ್ಟವಾಗುವುದಿಲ್ಲ.
ಅವಳನ್ನು ನನ್ನ ಕೋಣೆಯಲ್ಲೇ ಮಲುಗಿಸಿ, ನಾನು ಅವಳಿಗೆ ತಿಳಿಯದ ಹಾಗೆ ಬಟ್ಟೆಯನ್ನು ಕೈಯಲ್ಲಿ ಒಗೆದಿದ್ದೆ.
ಮನೆಯಲ್ಲಿದ್ದಾಗ ನನ್ನ ಬಿಡಿವಸ್ತ್ರವನ್ನೂ ಉಪಯೋಗಿಸಿದ ಮೇಲೆ ಮುಟ್ಟುತ್ತಿರಲಿಲ್ಲ..ಪಾಪ ಅಮ್ಮ ತೊಳೆದು ಹಾಕುತ್ತಿದ್ದಳು..
ಇನ್ನು ಹೊರಗಡೆ ಬಂದಮೇಲೆ ಹೇಗೂ ಲಾಂಡ್ರಿ,ಕೆಲಸದವಳು ಅಂತ ಅಭ್ಯಾಸ ಆಗಿತ್ತು...
ಅಮ್ಮ ತೊಳೆದು ಸ್ವಲ್ಪ ಒಣಗಿಸಲು ಹಿಂದಿ ಹಾಕು ಅಂತ ಎಷ್ಟು ಹೇಳಿದರೂ ಟಿವಿ ಎದುರಿನಿಂದ ಹಂದುತ್ತಿರಲಿಲ್ಲ...!
ನನ್ನ ಬಟ್ಟೆಯನ್ನೇ ಎಂದು ಹಿ೦ಡಿದವನಲ್ಲ..
ಅಂದು ಅವಳ ಬಟ್ಟೆ ಒಗೆದಿದ್ದೆ...!!!
ನನ್ನ ನಿಜವಾದ ಪ್ರೀತಿಗೆ ಇನ್ನೊಂದು ನಿದರ್ಶನ ಬೇಕಾ..?(ಅಂತ ಅಂದುಕೊಂಡಿದ್ದೆ)
ಕಾಲು ನೋವು ಅಂದಾಗ ಕಾಲು ಒತ್ತಿದೆ, ತಲೆಗೆ ಎಣ್ಣೆ ಹಚ್ಚಿದೆ...
ನಾವು ಪರಸ್ಪರ ವಿರೋಧಿಗಳು ನಡೆಯುತ್ತಿರುವ ಕಾರ್ಯಕ್ರಮದಲ್ಲಿ..
ಆದರೆ ಸ್ಪರ್ದೆ ಎಂಬುದನ್ನೂ ಮರೆತು ಸಹಾಯಮಾಡಿದೆ...
ನನ್ನತನವನ್ನು ನಾನು ಕಳೆದುಕೊಳ್ಳುತ್ತಿದ್ದೇನೆ ಎನ್ನುವುದನ್ನು ತಿಳಿದ ಮೇಲು ಅವಳ ಮನಸ್ಸಿಗೆ ನೋವಾಗಬಾರದು ಎಂಬ ಉದ್ದೇಶದಿಂದ ಎಲ್ಲವನ್ನೂ ಮಾಡಿದೆ.
ಬಟ್ಟೆ ಒಗೆದುಕೊಟ್ಟ ಆ ರಾತ್ರಿ ಇನ್ನೂ ನನ್ನ ಕಣ್ಣ ಮುಂದಿದೆ.
ಅವಳು ಭಾವಪರವಶಲಾಗಿದ್ದಳು ಅವಳ ಆ ಭಾವ ಸಿಹಿ ಚು೦ಬನವಾಗಿ ಮಾರ್ಪಟ್ಟಿತ್ತು.
ನೀನು ನನಗೆ ಮುಂಚೆ ಸಿಗುವುದಕ್ಕೆ ಏನಾಗಿತ್ತು?
ಬೇಸರದಲ್ಲಿ ನನ್ನ ಕಪಾಳಕ್ಕೆ ಬಾರಿಸಿದಳು ಕೂಡ.
ನಾನೇನು ಮಾಡಲಾದೀತು,
ನಮ್ಮ ತಂದೆ ತಾಯಿಗಳು ನಿನ್ನ ಊರಿನಲ್ಲಿ ಅಥವಾ ನಿನ್ನ ತಂದೆ ತಾಯಿ ನನ್ನ ಊರಿನಲ್ಲಿ ಹುಟ್ಟಲಿಲ್ಲ...
ಆದರೆ ಈಗಲೂ ಕಾಲ ಮಿಂಚಿಲ್ಲ ನಿನಗಾಗಿ ಈ ಜೀವ ಎಂದು ಕಾಯುತ್ತಿದೆ ಅವನನ್ನು ಮರೆತು ಬಾ..
ನನ್ನ ನ್ಜೀವನದ ಅಂಚಿನ ವರೆಗೂ ನಿನ್ನ ಸುಖವಾಗಿ ನೋಡಿಕೊಳ್ಳುವೆ ಎಂಬ ಭರವಸೆಯನ್ನು ಕೊಟ್ಟಿದ್ದೆ..
ಭರವಸೆಗೆ ಅವಳ ಹತಾಶೆಯ ನಗು ಉತ್ತರವಾಗಿ ಬಂದಿತ್ತು...!!!
ಆದರೂ ಆತನಿಂದ ದೂರಾಗಲು ಕಾರಣ ಇಲ್ಲವೇ...?
ಆಕೆ ಪೇಲವ ನಗೆ ನಕ್ಕು ಉತ್ತರಿಸಿದಳು..
ಅದರ ಸಾರಾಂಶ ನನ್ನ ಶಬ್ಧಗಳಲ್ಲಿ.......!
ಆಕೆಯ ಸ್ಥಿತಿ ನಿಜವಾಗಿಯೂ ರೇಸ್ ಕುದುರೆಯಂತೆಯೇ ಆಗಿತ್ತು..
ಇಷ್ಟ ವಿತ್ತೋ ಇಲ್ಲವೋ ಆಕೆಯ ಯಜಮಾನನ ಮಾತು ಕೇಳುವುದು ಅನಿವಾರ್ಯ..
ಅದು ಎಷ್ಟು ಪೆಟ್ಟು ತಿಂದರೂ ತನ್ನ ನಿಯತ್ತು ಬದಲಿಸುವಂತಿಲ್ಲ..
ಪ್ರೀತಿ ಕೇವಲ ಲಾಯದೊಳಕ್ಕೆ ಕಟ್ಟಿದಮೇಲೆ..
ಗೆದ್ದಾಗ ಹಣೆ ನೇವರಿಸುವುದು..
ಗೆಲ್ಲುವ ಮೊದಲು ಗೆಲ್ಲಲು ಮನವೊಲಿಸುವುದು...
ತನ್ನ ಲಕ್ಷ್ಯ ಬಿಟ್ಟು ಬೇರೆಡೆಗೆ ಹೊರಳುವಂತಿಲ್ಲ...
ಹೊರಳಿದರೂ ಏನು ಕಾಣದು ಆಟ ಕಟ್ಟಿದ ಗೋಡೆ ಅಡ್ಡವಾಗುತ್ತದೆ..!
ಮೇಲಿನಿಂದ ಮಹಾ ಅನುಮಾನ ಪಿಶಾಚಿ..
ಎಲ್ಲಿ ತನ್ನಿಂದ ದೂರಾಗುತ್ತಾಳೋ...ಎಂದು ಎಕ್ಸ್ಟ್ರಾ ಕೇರ್..!!
ಅದಾಗಿ ಎರಡು ತಿಂಗಳುಗಳೇ ಕಳೆದಿವೆ,
ಆದರೆ ಆ ಸಿಹಿ ಚು೦ಬನ, ಆ ನಗು, ಅಳು, ಹೇಯ್ love u ಅಂತ ಹೇಳಿ ಬಂದು ಅಪ್ಪಿಹಾಕಿಕೊಲ್ಲುತ್ತಿದ್ದ ಅವಳ ನೆನಪು ನನ್ನ ಬಿಟ್ಟು ಹೋಗಿಲ್ಲ.
ರಾತ್ರಿಯಾದರೆ ಸಾಕು ನಿದ್ದೆ ಹತ್ತುವುದಿಲ್ಲ,
ನನ್ನ ನಿನ್ನೆಗಳ ಅವಳ ನೆನಪು ಮಾಸಲು ಇನ್ನೆಷ್ಟು ನಾಳೆಗಳು ಬೇಕೋ ನಾನರಿಯೆ.
ನನ್ನ ಅಳುವಿನ ಅ೦ಕಿತವ ತೊಡೆದವಳು ಅವಳು,
ಬಿರಿ ಬಿರಿದ ವಡಲು ಬರಿದಾದ ಮಡಿಲಿಗೆ ನೆಮ್ಮದಿಯ ಶರತ್ಕಾಲವಾಗಿ ಬ೦ದವಲು ಅವಳು.
ಅವಳು ನಗೆಯಾದರೆ ನಾನು ತುಟಿಯಂಚಿನ ಬೆಳಕಾಗುವೆ,
ಹಾಡಾದರೆ ಭಾವವಾಗುವೆ,
ಜನ್ಮವಾದರೆ ಜನ್ಮದಾಚೆಗೂ ನಾ ಜೊತೆಗಿರುವೆ.
ಈ ಹುಡುಕಾಟದಲ್ಲಿ ನಾನು ಸ೦ಪಾದಿಸಿದ್ದು ಶೂನ್ಯ ಎಲ್ಲಿಯೂ ನಾನು ನನ್ನ ಸ್ವಾರ್ಥ ತೋರಲಿಲ್ಲ.
ಪ್ರೀತಿಯ ವಿನ ಏನನ್ನು ಬೇಡಲಿಲ್ಲ.
ಎಲ್ಲವನ್ನೂ ಸಮರ್ಪಿಸಲು ಸಿದ್ದನಿದ್ದೆ.
ಆದರೆ ಅವಳಿಗಿಂತ ಸಿಹಿ ಮುತ್ತು ನೀಡಿದವಳು ನನ್ನ ಮನದನ್ನೆಯಾಗಿಹಳು.
ಅವಳೇ ನನಗೆ ಕಡೆತನಕ.
Lover

ಅವಳ ಕಣ್ಣನ್ನ ನೋಡ್ತಾ ಇದ್ರೆ ಯಾಕೋ ಗೊತ್ತಿಲ್ಲ ನನ್ನ ಕಣ್ಣು ತೇವ ಆಗ್ತಾ ಇತ್ತು,
ಈಗ ಅವಳ ನೆನಪಾದಾಗ ಆಗ್ತಾ ಇದ್ಯಲ್ಲ ಹಾಗೆ. ಅದೆಷ್ಟೋ ರಾತ್ರಿಯನ್ನ ಹಗಲು ಮಾಡಿದ್ವಿ ಒಟ್ಟಿಗೆ ಕೂತು. ಈಗಲೂ ಮಾಡ್ತಾ ಇದೀನಿ ಆದ್ರೆ ಅವಳು ಜೊತೆ ಇರಲ್ಲ.
ಅವಳ ನೆನಪು ಮಾತ್ರ ಇರತ್ತೆ. ನಡೆಯುವ ಪ್ರತಿ ಹೆಜ್ಜೆಯಲೂ ನೆನಪುಗಳು ಮುತ್ತಿಕೊಳತ್ತೆ.
ಬೇಡ ಅಂದರೂ ಕೊಳೆತ ನಿನ್ನೆಗಳು ಇಂದು, ನಾಳೆಗಳನ್ನು ಕಾಡತ್ತೆ.
ಅವಳೇ ಹಾಗೆ. ಅವಳೆಂದರೆ ಶರತನ ಅಹಂ ಅಡಗಿ ಬಾಲ ಮುದುರಿದ ಹೆಣ್ಣು ನಾಯಿಯ ತರ ಆಗಿ ಹೋಗತ್ತೆ. ಶಿಶಿರ ಅಂದ್ರೆ ಕಾಲೇಜಿನ ಪ್ರಾಂಶುಪಾಲರು ಕೂರಿಸಿ ಮಾತಾಡಿಸ್ತಾರೆ ಆದ್ರೆ ಅವಳು ಮಾತ್ರ ನನಗೆ ಅವಾಜ್ ಹಾಕೋದು "ಹೇಯ್ ಮುಚ್ಕೊಂಡಿರೋ ಗೊತ್ತು" ಹೀಗೆ ಹೇಳಿದ ಮರು ಕ್ಷಣವೇ ನನಗೂ ನಗೂ ಅವಳಿಗೂ ನಗು, "ಕ್ಯೂಟು ಬೇಬಿ" "ಸ್ವೀಟು" "ಕಂದ" ಆದರೆ ಇನ್ನೆಲ್ಲಿಯ ಕಂದ ಆಗಲೇ ಈ ಕಂದನ ನಿದ್ರೆ ಕಸಿದುಕೊ೦ಡು ನನ್ನ ನೆನಪನ್ನೂ ಮಾಡಿಕೊಳ್ಳದೆ ನನ್ನ ಕಂದ ಆರಾಮಾಗಿ ಜೀವನ ಸಾಗಿಸುತ್ತಿದ್ದಾಳೆ.
ಅವಳಿಗೆ ನಾನು ಬರಿ ಕನಸು, ಆದರೆ ನನಗೆ ಅವಳು ನೆನಪು,
ಕನಸು, ನಿನ್ನೆ, ನಾಳೆ, ಎಲ್ಲವೂ ಅವಳೇ...
ಧೂಮಪಾನ ಮಾಡಿ ಸಿಕ್ಕಿ ಹಾಕಿಕೊ೦ಡಾಗಲು, ಅಮ್ಮ ಅಪ್ಪ ಅಕ್ಕ ನೆಂಟರು ಎಲ್ಲರೂ ಬೈದಾಗಳೂ ಇಷ್ಟು ಅತ್ತಿರದಿದ್ದ ಶಿಶಿರ ಇವಳಿಗೋಸ್ಕರ ದಿನವಿಡೀ ಅಳುತ್ತಾನೆ ಎಂದರೆ ನೀವೇ ಲೆಕ್ಕಹಾಕಿಕೊಳ್ಳಿ.
ಅವಳ ನೆನಪು ಆಗ್ತಾ ಇದ್ರೆ ಯಾವುದೋ ಒಂದು ಕವನ ಗೀಚಿದ ಅನುಭವ ಆಗತ್ತೆ.
"ಮೇಘಗಳ ಸಾಲಿನಲ್ಲಿ ಭಾಸ್ಕರನ ಒಂಟಿಪಯಣ"..... ಹೌದು ಈಗ ನಾನು ಒಂಟಿಯೇ.
"ನೀರೆಲೆಯ ನಾದದಲ್ಲಿ ಶಿಶಿರನ ಶೋಕಕಥನ" ಜಾರುತಿದೆ ಹಸ್ತದ ಬೆಸುಗೆ ಸರಿಯುತಿದೆ ಅಪ್ಪುಗೆ ಸಲಿಗೆ............."
ಸರಿದು ಯಾವ ಕಾಲವಾಯಿತೋ. ದರಿದ್ರದ ನೆನಪಿನ ಶಕ್ತಿ ದಿನಾಂಕ ಮರೆತುಹೊಗತ್ತೆ.
"ಕೊರಗುತಿರೋ ಹೃದಯದ ಕರೆಗೆ, ಕಣ್ಣೀರ ಕೊಡುಗೆಯ ಕ್ಷಣಕೆ, ಬರೆದುದೆಲ್ಲವೂ ಕವಿತೆ.........."
ಹೌದು ಕಣ್ಣೀರು ಎಂತವನನ್ನೂ ಕವಿಯಾಗಿಸುತ್ತದೆ, ಗೀಚುವ ಶಕ್ತಿ ಒದಗಿಸುತ್ತದೆ.
"ನ೦ಬಿಕೆಯ ಆಸರೆಯಲ್ಲೇ ಮೋಸದ ಕತ್ತಲೆ ಕದನ,ಸಂತಸದ ಬಾಳ ಪುಟದೀ ಒಲುಮೆಯ ಪದಗಳ ಹರಣ........"
ನಂಬಿದ್ದೆ ಇವಳೇ ನನ್ನ ಬಾಳ ಸಂಗಾತಿ ಆಗುತ್ತಾಳೆ. ನನ್ನ ನಾಳೆಗಳಲ್ಲಿ ಜೊತೆ ಇರುತ್ತಾಳೆ ಎಂದು.
ಆದರೆ ಸಿಕ್ಕಿದ್ದು .......!
ನೆನಪೆಂಬ ಚೂರಿಯ ಇರಿತ, ದೂರಾದ ಗೆಳತಿಯ ಸನಿಹ....!!!
ನನ್ನ ಪಾಲಿಗೆ ದೊರಕಿದ್ದು.
"ಸುರಿಸುತಿದೆ ನೋವಿನ ಮಳೆಯ, ಸಾಗದೆ ನಿಂತಿಹ ಸಮಯ,ನರಳುತಿಹ ಬರಹವೀ ಕವಿತೆ.......!
ನರಳ್ತಾ ಇರೋದು ನನ್ನ ಬರಹ ಅಲ್ಲ. ಅದು ಇನ್ನೂ ಹೆಚ್ಚಿನ ತಾಕತ್ತನ ಇತ್ತೀಚಿನ ದಿನಗಳಲ್ಲಿ ಪಡೆದಿದೆ.
ಆದರೆ ನಲುಗ್ತಾ ಇರೋದು ನನ್ನ ಮನಸು...!
"ನಲಿವುಗಳ ಬಂಧನದಲ್ಲೇ ಮರುಗುತಿದೆ ಮೌನದ ಮನನ, ಕಳೆಯುತಿರೋದಿನಗಳ ಹಿಂದೆ ಕೊಲೆಯಾದ ಕನಸಿನ ಮರ್ಮ.........!!
ಏನು ಹೇಳೊಕಾಗ್ತಿಲ್ಲ ಈ ಸಾಲಿಗೆ ನೀವು ನನಗಿಂತ ಬುದ್ದಿವಂತರು ಅರ್ಥ ಮಾಡ್ಕೊಳ್ತೀರಿ ನನ್ನ ನೋವನ್ನ ಅನ್ಕೊಂಡಿದೀನಿ.
"ಹರಟುತಿರೋ ಮನಸಿನ ನಡುವೆ ಮರೆಯಾದ ಮಾತಿನ ಭವನ, ಅವಳನ್ನು ಸೇರದೆ ಕರಗಿ ನೀರಾಗಿ ನಿಂತಿದೆ ಬದುಕು. ದುರಂತದ ಸಾಲುಗಳೇ ಈ ಕವಿತೆ.......!
ಆದ್ರೆ ಇದುಸತ್ಯ. ವಿಧಿಬರಹ ಎಂತ ಘೋರ ಪ್ರೇಮಿಗಳು ದೂರ ದೂರ ಹಸಿರಾಗೋ ಪ್ರೇಮ ಕಥೆಗೆ ಉಸಿರಾಗೋ ಜಗವು ದೂರ..!!
ಈ ಹಾಡು ನನಗಾಗಿಯೇ ಬರೆದಂತೆ ಭಾಸವಾಗುತ್ತಿದೆ..

ಕಾಯುವೆ ತೊಟ್ಟು ಮಳೆಗಾಗಿ ಕಾದು ನಿಲ್ಲುವ ರೈತನ ಹಾಗೆ. ಮಕರ೦ದಕ್ಕಾಗಿ ಶರತ್ ಕಾಲದವರೆಗೂ ಕಾಯುವ ಮರಿ ದು೦ಬಿಯ ಹಾಗೆ, ಕೆಲಸಕ್ಕೆ ಕಾಯುವ ನಿರುದ್ಯೋಗಿಯ ಹಾಗೆ. ನೋವಿನ ಅ೦ಕಿತವ ತೊಡೆದುಹಾಕಿ ಒಲವಿನ ರಕ್ಷೆಯ ನೀಡಿ ಈಗ ನೋವಿನ ದಳ್ಳುರಿಗೆ ತಳ್ಳಿರುವ ನೀನೆ ನನಗೆ ಕಡೆ ತನಕ. ಕಾಯುವೆ ಉಸಿರಿರುವತನಕ...
ಮೊದಲು ಭಾರತೀಯ ಜನತಾಪಕ್ಷದ ಹಳೆ ಅಧ್ಯಕ್ಷರ ಹಾಗೆ ಮುಗುಳ್ನಕ್ಕೆ
ನಂತರ ಕಾಂಗ್ರೆಸ್ಸ್ ಅಧ್ಯಕ್ಷೆ ಯಂತೆ ಕೈ ಆಡಿಸಿದೆ..
ನನ್ನ ಪ್ರೀತಿ ನಿನಗೆ ಜನತಾದಳದ ಹೊರೆಯಾಗುವುದು ಬೇಡ........!
-------------------------------------------------------------------------------------------------------------------------
ಚಂದ್ರನ ತಂಪು ಹುಣ್ಣಿಮೆ ಅಮಾವಾಸ್ಯೆಗಳಲ್ಲಿ ವ್ಯತ್ಯಾಸ ವಾಗುವುದಿಲ್ಲ.. ವ್ಯತ್ಯಾಸವಾಗುವುದು ಬೆಳದಿಂಗಳು ಮಾತ್ರ...!!!
With Love-