ಪ್ರಿಯ ರಾಕೇಶ್ ಎನ್ ಎಸ್ ಮತ್ತು ವಿನಾಯಕ ಅವರೇ,
ತಮ್ಮ ಬ್ಲಾಗ್(http://5wonly1h.blogspot.com/2010/03/blog-post.html ನಲ್ಲಿ ಉತ್ತರಿಸಲು ಕಷ್ಟವಾದ(ಸ್ಥಳಾವಕಾಶ ಇಲ್ಲದ) ಕಾರಣ ಇಲ್ಲಿ ಉತ್ತರಿಸುತ್ತಿದೇನೆ.
ತಮ್ಮ ಲೇಖನದ ಶೀರ್ಷಿಕೆ ತುಂಬಾ ಹಾಸ್ಯಾಸ್ಪದ ಎನಿಸಿತು.
ಕಾರಣ ನೀವಿನ್ನೂ ಪತ್ರಿಕೋದ್ಯಮ ವಿದ್ಯಾರ್ಥಿ ಎನ್ನುತ್ತಿದ್ದೀರಿ ಆದರೆ ತಾವು ಈಗಾಗಲೇ ಯಾವುದೋ ಇಸಂ ಗೆ ಬಲಿಯಾದಂತೆ ತೋರುತ್ತಿದೆ ನಿಮ್ಮ ಶೀರ್ಷಿಕೆ .
ಎಲ್ಲಾ ಜವಾಬ್ದಾರಿಗಳೂ ಪತ್ರಕರ್ತನದ್ದೇನಲ್ಲ!
ತಮ್ಮ ಹೆಡ್ಡಿಂಗ್ ನಲ್ಲಿ ನನಗೆ ಸರಿ ಎನ್ನಿಸಿದ್ದು ಆಶ್ಚರ್ಯಸೂಚಕ ಚಿಹ್ನೆ ಮಾತ್ರ.
ಏಕೆಂದರೆ ವಾಹನ ಚಾಲಕ ಒಂದೊಮ್ಮೆ ನನಗೆ ನಿದ್ರೆ ಬಂದರೆ ಅಪಘಾತಕ್ಕೆ ನಾನು ಹೊಣೆಗಾರನಲ್ಲ ಎಂದಂತಾಯಿತು.
ಇನ್ನು ತಾವು ಹೇಳಿದಂತೆ
ಖಂಡಿತವಾಗಿಯೂ ಮಿಡಿಯಾ ಪರ್ಸನ್ಸ್ ಗಳಿಗೆ ವಿಶೇಷವಾದ ಸಾಂವಿದಾನಿಕ ಹಕ್ಕಿಲ್ಲ.
ಆದರೆ,
ಇಲ್ಲಿ ಯಾರಿಗೂ ಯಾವ ಅಧಿಕಾರವು ಇಲ್ಲ ಯಾರಿಗೂ ಯಾವ ಅಧಿಕಾರವು ಇಲ್ಲದಿಲ್ಲ.
ಇಂದು ಮಾಧ್ಯಮಗಳು ಮೂಲಮೌಲ್ಯಗಳನ್ನು ಕೆಲವೇ ಕಲವು ಸಂಧರ್ಭಗಳಲ್ಲಿ ಮಾತ್ರ ನೆನಪಿಸಿಕೊಳ್ಳುತ್ತೇನೋ ಎನ್ನಿಸುಂತಿದೆ ನಮ್ಮೆದುರಿನ ಚಿತ್ರಣ.
ಮಾಧ್ಯಮ ಎಂದರೆ ಕೇವಲ ಒಂದು ಚಾನೆಲ್ ಅಥವಾ ಒಂದು ಪತ್ರಿಕೆ ಎಂದಲ್ಲ ಎಂದು ನೀವೇ ಹೇಳಿದಿರಿ.
ಸ್ವಾಮಿ ತಾವು
ಮಾಧ್ಯಮಗಳು ಬಹುಪಾಲು ಸಂದರ್ಭದಲ್ಲಿ ಈ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿವೆ.
ಕೆಲ ಸಂದರ್ಭಗಳಲ್ಲಿ ಮತ್ತು ಕೆಲ ಮಾಧ್ಯಮಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ, ವೈಭವೀಕರಣ, ನಿರ್ಲಕ್ಷ್ಯ ಮತ್ತು ತಮ್ಮ ’ಇಸಂ’ಗಳ ಮಿಶ್ರಣದಿಂದ ಪತ್ರಿಕಾಧರ್ಮಕ್ಕೆ ಚ್ಯುತಿಯಾಗಿರಬಹುದು. ಅದನ್ನು ಹೊರತು ಪಡಿಸಿ ಮತ್ತು ಕೆಲ ಬಾಲ ಬಡುಕ ಮತ್ತು ಪಕ್ಷ ನಿಷ್ಠ, ಮತ್ತು ವ್ಯಕ್ತಿ ನಿಷ್ಠ ಮಾಧ್ಯಮಗಳನ್ನು ಬದಿಗಿಟ್ಟು ನೋಡಿದರೆ ಇಂದಿಗೂ ಮಾಧ್ಯಮಗಳು ತಮ್ಮ ಮೂಲ ಆಶಯವನ್ನು ಮರೆಯದೆ ಜನರಲ್ಲಿ ಜಾಗ್ರತಿ ಮೂಡಿಸುವ ಕಾರ್ಯನಿರ್ವಹಿಸುತ್ತಿವೆ. ಆದರೆ ಸಮಾಜ ತಾನು ಜಾಗ್ರತ ಗೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಬಿದ್ದು ಕೊಂಡರೆ ಅದಕ್ಕೆ ಯಾರು ಹೊಣೆ ಎಂದಿರಿ ಇಲ್ಲಿರುವ ಎಲ್ಲ ಅಂಶಗಳು ಒಂದೊಂದು ಮಾಧ್ಯಮದಲ್ಲಿ ಇದೆ ಹಾಗಾದರೆ ಒಂದು ನಿಜವಾದ ವಸ್ತುನಿಷ್ಠ ಸುದ್ದಿ ನಾವೆಲ್ಲಿಂದ ಪಡೆಯಬೇಕು. ಈ ಇಸಂ ಗಳಿಗೆ ಬಲಿಯಾಗದ ಮಾಧ್ಯಮವೇ ಇಲ್ಲವೇ ಅಥವಾ ಯಾವುದು ಇಸಂ-ಫ್ರೀ ಎಂದು ನಮ್ಮ ಜೀವಮಾನವಿಡೀ ಪರೀಕ್ಷಿಸುತ್ತಿರಬೇಕೇ.?
ಕೆಲವು ವರ್ಶಗಳ ಹಿಂದೆ ಪತ್ರಿಕೆಗಳಲ್ಲಿ ಎರಡು ವಿಧವಿತ್ತು ಪೀತಪತ್ರಿಕೆ ಹಾಗೂ ಪತ್ರಿಕೆ ಎಂದು ಆದರೆ ನನಗೆ ಈಗ ಯಾವುದು ಪೀತ ಯಾವುದು ಶ್ವೇತಎಂದು ಗುರ್ತಿಸುವುದೇ ಕಷ್ಟವಾಗಿದೆ ರವಿಬೆಳೆಗೆರೆಯವರು ಹೆಚ್ಚೋ ಪ್ರತಾಪಸಿಂಹನವರು ಹೆಚ್ಚೋ ಎಂದು ದಿನಾ ಅಳೆಯುವುದೇ ಆಗಿದೆ.
ಇಂದು ಮಾಧ್ಯಮ ಬಿತ್ತರಿಸುವ ಸುದ್ದಿಗಳನ್ನೇ ತೆಗೆದುಕೊಳ್ಳಿ ಒಬ್ಬ ಆರೋಪಿಯನ್ನು ಅಪರಾಧಿಯನ್ನಾಗಿ ಬಿಂಬಿಸುವ ಮಾಧ್ಯಮ ಆತ ನಿರಪರಾಧಿ ಎಂದು ಸಾಬೀತಾದಾಗ ಎಲ್ಲಿರುತ್ತದೆ..?
ಘನ ನ್ಯಾಯಾಲಯವು ಕೂಡಾ ಅರೋಪಿ ಎನ್ನುವಾಗ ಮಾಧ್ಯಮ ಆತನನ್ನು ಅಪರಾಧಿ ಎನ್ನುವುದು ಎಷ್ಟು ಸರಿ.?
ಮಾಧ್ಯಮದವರನ್ನು ಏಕವಚನದಲ್ಲಿ ಸಂಭೋದಿಸಿದರೆ ಆತ ಮುಂದಿನ ಕ್ಷಣದಲ್ಲಿ ವಿಲನ್ ಆಗಿ ಬಿತ್ತರಗೊಳ್ಳುತ್ತಾನೆ.
ಆದರೆ ಮಾಧ್ಯಮದವರು ಯಾರನ್ನು ಬೇಕಾದರೂ ಯಾವಭಾಷೆಯಲ್ಲಿಯೂ ಸಂಭೋದಿಸಬಹುದೇ.?
ಉದಾ:- ಸ್ವಾಮಿ ನಿತ್ಯಾನಂದಅವರ ಬಗ್ಗೆ ಹಲವಾರು ಆರೋಪಗಳು ಕೇಳಿಬಂದವು ಅಂದಿನವರೆಗೂ ದೇವರೆಂದು ತೋರಿಸುತ್ತಿದ್ದ ಅದೇ ಮಾಧ್ಯಮಗಳು ಅವರನ್ನು ಏಕವಚನದಲ್ಲಿ ನಿಂದಿಸಲಾರಂಭಿಸಿದವು.
ಅವರ ಆರೊಪ ಸಾಬೀತಾಗಿರಲಿಲ್ಲ ಅವರಿಗೆ ಅವರದೇ ಆದ ಅನುಯಾಯಿಗಳು ಅಭಿಮಾನಿಗಳು ಇರುತ್ತಾರೆ ಅವರ ಭಾವನೆಗಳಿಗೆ ಧಕ್ಕೆಯುಂಟಾಗುವುದಿಲ್ಲವೇ.?
ಇಂದು ತಮ್ಮ ಹೈಪ್ ಹಾಗೂ ಟಿ ಆರ್ ಪಿ ಕಾಪಾಡಿಕೊಳ್ಳಲು ಮಾಧ್ಯಮ ಏನೆಲ್ಲಾ ಮಾಡುತ್ತಿದೆ ಎಂದು ನಾವು ದಿನನಿತ್ಯ ಕಣ್ಣು ಕಿವುಡಾಗಿಸಿ ನೋಡ್ತಾ ಇದ್ದಿವಿ ಮತ್ತು ನೀವು ತೋರ್ಸಿದಿರಿ (ರಣ್-ಹಿಂದಿ ಸಿನೆಮಾ).
ಇಂದು ಭಾರತದಲ್ಲಿ ಸಲಿಂಗ ಕಾಮ ಹೆಚ್ಚಾಗಕ್ಕೆ ನಿವಲ್ದೆ ಮತ್ಯಾರ್ರಿ ಕಾರಣ ?
ತಾವು ತಾವು ರೂಮಲ್ಲಿ ಮಾಡ್ಕೊತ್ತಿದ್ದಿದ್ದನ್ನ ನೀವೇ ಅಲ್ವ ದೊಡ್ಡ ದೊಡ್ಡ ಪರದೆ ಮೇಲೆ ತೋರ್ಸಿ ಹೇಳ್ಕೊಟ್ಟಿದ್ದು?
ನಿಮ್ಮ ಕಥೆ ನೋಡಿ ಲವ್ ಮ್ಯಾರೇಜ್ ಅಂತ ಓದ್ಹೊದ್ರಲ್ಲ ಅವ್ರ ಅಪ್ಪ ಅಮ್ಮನ ಮರ್ಯಾದೆನ ನೀವು ವಾಪಸ್ ತಂಕೊಡ್ತಿರಾ?
ಖಂಡಿತಾ ಇಲ್ಲ ಯಾಕೆ ಹೇಳಿ ನಿಮಗೆ ಓಡೋದ್ರೆ ಇನ್ನೊಂದು ಬಾಕ್ಸ್ ಐಟಂ- ಬ್ರೆಕಿಂಗ್ ನ್ಯೂಸ್.. !
ಅವರಪ್ಪ ಅಮ್ಮನ ಹಾರ್ಟ್ ಬ್ರೇಕ್ ಆಗಿದ್ದಕ್ಕೆ ನೀವೇನ್ ಫೆವಿಕಾಲ್ ಮರಿನ್ ತಂದ ಹಚ್ತಿರಾ?
ಚಲನಚಿತ್ರಗಳಲ್ಲಿ ರೊಮ್ಯಾಂಟಿಕ್ ಸೀನ್ ಹಾಕುತ್ತಾರೆ ಮಸಾಲಾ ದೃಶ್ಯ-ಸಾಹಿತ್ಯ ಹಾಕುತ್ತಾರೆ ಸೆನ್ಸಾರ್ ಮಂಡಳಿ ಮಸಾಲಾ ಸಾಹಿತ್ಯವಿದ್ದಲ್ಲಿ ಬೀಪ್ ಶಬ್ಧ ಹಾಕುತ್ತದೆ ಆದರೆ ಏನು ಪ್ರಯೊಜನ.?
ಹಿಂದೆ ಮುಂದೆ ಇರುವ ಸಂಭಾಷಣೆ ಕೇಳಿದವನು ತಾಂತಾನೆ ಮಧ್ಯದ ಫಕ್ ಸೇರಿಸುಕೊಳ್ಳುತ್ತಾನೆ.
ಕೇವಲ ಆಂಗ್ಲ ಚಿತ್ರಗಳಲ್ಲಿ ಕಾಣಿಸುತ್ತಿದ್ದ ಲಿಪ್ ಲಾಕ್ ಈಗ ಬಿಡುಗಡೆಯಾಗುವ ಎಲ್ಲಾ ಚಿತ್ರಗಳಿಗೆ ಖಡ್ಡಾಯ..
ಅಲ್ಲಿ ಚಿತ್ರದಲ್ಲಿ ಕಾಣಿಸುತ್ತಿದ್ದಂತೆ ಇಲ್ಲಿ ನೋಡುತ್ತಿದ್ದವನೂ ಟ್ರೈ ಮಾಡುತ್ತಾನೆ..
ಎರಡು ವರ್ಷಕ್ಕೆ ಒಂದ್ ಸಲ ತಾರೆ ಜಮಿನ್ ಪರ್ ಬಂದರೆ ಏನ್ರಿ ಪ್ರಯೋಜನ?
ದಿನಕ್ಕೊಂದು ಮರ್ಡರ್,ಜನ್ನತ್,ಗಂಡ ಹೆಂಡತಿ ಅಂತ ಬರ್ತಾನೆ ಇದ್ರೆ?
ಲವ್ ಮ್ಯಾರೇಜ್ ಹೆಚ್ಚಾಗಲು ಕಾರಣ ?
ಲವ್ ಜಿಹಾದ್ ಶಬ್ಧಸಿಗಲು ಕಾರಣ ?
ಅಲ್ಲಾರಿ ಜನ ಯಾರ್ಯಾರು ಏನೇನು ಬೈಕಂಡ್ರು ಅಂತ ಕೇಳಲ್ಲ ಆದ್ರೆ ನೀವು ತೋರ್ಸಿ ತೋರ್ಸಿ ಅವರ ಜಗಳ ಜಾಸ್ತಿ ಮಾಡ್ತೀರ.
ಕಾಂಟ್ರವರ್ಸಿ ನ ಹುಟ್ ಹಾಕೋದೇ ನೀವು..
ಜನ ನಿದ್ದೆ ಮಾಡ್ತಿದಾರೆ ಅಂತ ಯಾಕ್ರಿ ಹೇಳ್ತೀರ ಬಿಜಾಪುರದಲ್ಲಿ ಯಾವದೋ ಹಳ್ಳಿಲಿ ಯಾವ್ದೋ ಒಬ್ಬ ರೈತ ಆತ್ಮಹತ್ಯೆ ಮಾಡ್ಕೊಂಡ ಅಂತ ವಾರಕ್ಕೆ ನಾಲ್ಕ ಪಕ್ಷನ ಅಧಿಕಾರದಿಂದ ಕೆಡುವ್ತಾ ಇದ್ರೆ ಯಾರಿಗ್ರೀ ನಶ್ಟ.?
ನೀವು ಅವ್ರು ತಪ್ಪು ಇವ್ರ್ ತಪ್ಪು ಅಂತ ಜನಕ್ಕೆ ತೋರ್ಸಿ ಏನ್ ಪ್ರಯೊಜ್ನ ಆಯ್ತು ಹೇಳಿ ನಿಮ್ಮಿಂದಾಗಿ ಪಾಪದ ಜನ ಯಾರನ್ನು ನಂಬೋಹಾಗೇ ಇಲ್ಲ ಕಡೇಗೆ ನಿಮ್ಮನ್ನೂ..!
ಅಲ್ಲಾ ಸ್ವಾಮೀ ನೀವು ಮೋಹನ ಕುಮಾರನ ಕಥೆನ ಎಳೆ ಎಳೆಯಾಗಿ ಬಿಚ್ಚಿಟ್ರಲ್ಲ ಅದರಿಂದ ಎಷ್ಟು ಮನೆ ಹಾಳಾಯ್ತು ಗೊತ್ತಾ..?
ಟೀನ್ ಏಜ್ ನ ಎಷ್ಟು ಹುಡುಗರು ಅದನ್ನ ಓದಿರ್ತಾರೆ ಅವರಲ್ಲಿ ಸುಪ್ತವಾಗಿದ್ದ ಕಾಮತೃಷೆ ಜಾಸ್ತಿ ಆಗಿ ಹೊಸ ಹೊಸ ಐಡಿಯಾ ಸಿಕ್ಕಿದಂಗಾಯ್ತು.
ಅದರ ಬದಲು ಆತ ವಿಕೃತಕಾಮಿಯಾಗಿದ್ದ ಅಂತ ಹೇಳಿದ್ರೆ ಮುಗಿತಿತ್ತಲ್ವ.?
ನಿಜವಾಗಿಯೂ ಸುದ್ದಿ ಬೇಕಾದವನು ನಾಲ್ಕು ಐದನೇ ಪುಟಾನೂ ಒದ್ತಾನೆ ಎಲ್ಲಾ ಫ್ರಂಟ್ ಪೇಜಲ್ಲೇ ಕವರ್ ಮಾಡ್ಬೇಕು ಅಂತ ಇಲ್ಲ.
ಅಲ್ರೀ ಸ್ವಾಮೀ ನಾನು ಮತ್ತು ವಿನಾಯಕ ಅವ್ರೆ,
ಎನ್ ಮಾತ್ರಿ ಅದು.?
ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮದ ಬಗ್ಗೆ ಮಾಧ್ಯಮಗಳು ಕೆಲ ವರ್ಷಗಳ ಹಿಂದಿನಿಂದಿನಿಂದಲೇ ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸ ಮಾಡಿದ್ದವು. ಆದರೆ, ಆ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿರಲಿಲ್ಲ. ಯೋಚಿಸಿದ್ದರೂ ಕೂಡ ಅದನ್ನು ಸಂಘಟಿತರಾಗಿ ಆಡಳಿತರೂಡರ ಗಮನಕ್ಕೆ ತಂದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ವಿಫಲರಾಗಿದ್ದರು. ಜಗತ್ತಿನ ತಾಪಮಾನ ಏರುತ್ತಿದೆ ಎಂಬುದಕ್ಕೆ ಸಾಕಷ್ಟು ಆಧಾರಗಳಿದ್ದವು ಮತ್ತು ಅದರಿಂದ ದುಷ್ಪರಿಣಾಮಗಳಾಗುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳನ್ನು ವಿಜ್ಞಾನಿಗಳು ಇದೇ ಮಾಧ್ಯಮಗಳ ಮೂಲಕ ಜನರಿಗೆ ನೀಡಿದ್ದರು. ಆದರೆ ಸಮಾಜದ್ದು ಎಂದಿನ ’ಘನ’ ನಿದ್ದೆ. ಆದೇ ಯಾರೋ ಕಿಸಿಬಾಯಿ ದಾಸಯ್ಯ ಡಿಸೆಂಬರ್ ೨೧, ೨೦೧೨ಕ್ಕೆ ಪ್ರಳಯವಾಗುತ್ತದೆ ಎಂದದ್ದೇ ತಡ ಆ ಸುದ್ದಿ ಬೆಳಕಿನ ವೇಗದಲ್ಲಿ ಜನರ ನಡುವೆ ಓಡಾಡಿತ್ತು. ಟಿವಿಯಲ್ಲಿ ಬರುವ ಜ್ಯೋತಿಷಿಗಳು ನಾಯಿ ಮಲ ತಿಂದರೆ ನಿನ್ನ ಸಮಸ್ಯೆ ಪರಿಹಾರವಾಗುತ್ತದೆ ಎಂದರೆ ಅದನ್ನು ತಿನ್ನಲು ತಯಾರಾಗಿರುವವರಿದ್ದಾರೆ. ಆದೇ ಒಬ್ಬ ವಿಜ್ಞಾನಿ ಕುದಿಸಿದ ನೀರು ಕುಡಿಯಿರಿ ಎಂದರೆ ನಮಗೆ ಒಗ್ಗಿ ಬರುವುದಿಲ್ಲ. ಇಂದಿಗೂ ಮೂಢ ನಂಬಿಕೆಗಳಿಂದ ಹೊರಬರಲು ಸಾಧ್ಯವಾಗದ ಸಮಾಜದ ಮಧ್ಯೆ ವ್ಯೆಜ್ಞಾನಿಕ ಮನೋಭಾವ ಬಿತ್ತುವುದು ಅದೇಷ್ಟು ಕಷ್ಟ. ಈ ಮಿತಿಯಲ್ಲೂ ಮಾಧ್ಯಮಗಳು ವೈಜ್ಞಾನಿಕ ಮಾಹಿತಿ ಕೊಡುವಲ್ಲಿ ಶ್ರಮಿಸಿವೆ. ಆದರೆಡೆಯಲ್ಲಿ ಕೆಲವರು ಮೂಡನಂಬಿಕೆಗಳನ್ನು ಮಾರ್ಕೆಟ್ ಮಾಡುವ ಕೆಲಸ ಮಾಡಿರಬಹುದು. ಆದರೂ ಅವರು ಜಾಗತಿಕ ತಾಪಮಾನದ ಬಗ್ಗೆ ಈ ಮೊದಲು ಉಲ್ಲೇಖ ಮಾಡಿದ್ದರು
ಸ್ವಾಮಿ ನೀವು ಮೊದ್ಲು ಜಾಗತಿಕ ತಾಪಮಾನದ ಬಗ್ಗೆ ತಿಳುವಳಿಕೆ ಕೊಟ್ಟರೂ ಯಾರೂ ತಮ್ಮ ಘನ ನಿದ್ರೆ ಬಿಟ್ಟಿಲ್ಲ ಅಂದ್ರಲ್ಲ,
ಅಲ್ಲಾರಿ ಕೂಸನ್ನೂ ಚೂಟಿ ತೊಟ್ಲು ತೂಗೊ ಆಟ ಆಡ್ತೀರಲ್ರಿ ನೀವು..
ಯಾವನೋ ಒಬ್ಬ ಕಿಸ್ಬಾಯಿದಾಸ ಹೇಳಿದ ಪ್ರಳಯ ಆಗುತ್ತೆ ಅಂತ ನಾವೆಲ್ಲಾ ಅದ್ನ ಒಪ್ಕೊಂಡ್ವಿ ಸರಿ ಆದ್ರೆ ನಮ್ಗೆ ಅದ್ನ ಹೇಳಿದ್ಯಾರು?
ಆವಪ್ಪ ಎನ್ ವಿಶ್ವಾದ್ಯಂತ ಎಲ್ಲರ್ ಕನ್ಸಲ್ ಬಂದು ಹೇಳಿದ್ನೇನ್ರಿ?
ನೀವೋ ಅಥವಾ ನಿಮ್ಮ ಸೀನಿಯರ್ರೊ ನಮ್ಗೆಲ್ಲಾ ಸುದ್ದಿ ಮುಟ್ಸಿದ್ದು..?
ನೀವು ಬರಿ ಕೆಬಲ್ ಮಾಡೊ ಕೆಲ್ಸಾ ಮಾತ್ರ ಮಾಡಕ್ಕಿರೊದಾ ಅಥವಾ ಸ್ಟೆಬಿಲೈಜರ್ ಕೆಲ್ಸಾ ಮಾಡೊಕ್ಕಾ?
ನಿಮ್ಗೇನ್ ಬಂತೊ ಅನ್ನೊದನ್ನ ಸೀದಾ ಜನಕ್ಕೆ ತುರುಕೋಮೊದಲು ಸ್ವಲ್ಪ ಯೋಚನೆ ಮಾಡ್ರಿ.
ಅಲ್ಲಾ ಯಾರೊ ಜ್ಯೊತಿಷಿ ಹೇಳಿದ್ರೆ ಸಗಣೀ ಬಾಯಿಗಾಕ್ಕೊತಾರೆ ಅಂದ್ರಲ್ಲ ಮತ್ತೆ ನೀವುಗಳ್ಯಾಕೆ ದಿನಾ ಬೆಳಗ್ಗೆ ಒಂದೊಂದು ಘಂಟೆ ಅದು ಇದು ಅಂತ ಯಾರ್ಯಾರನ್ನೊ ಹಿಡ್ಕೊಂಬಂದು ಕುಯ್ಯಿಸ್ತಿರಾ?
ಯಾವ ಪೇಪರ್ ನೋಡಿದ್ರು ದಿನ ಭವಿಷ್ಯ ಅದು ಇದು ಅಂತ ಯಾಕ್ ಹಾಕ್ತೀರ?
ಆ ಆಕ್ಟೋಪಸ್ ನ ರಾತ್ರೊರಾತ್ರಿ ಆ ಪರಿ ಬೆಳ್ಸಿದ್ಯಾರು?
ನೀವೇ ಪತ್ರಿಕೋದ್ಯಮಿಗಳು ತಾನೇ?
ಯಾಕ್ರಿ ಜನನ್ ಸುಮ್ನೇ ಬಯ್ತೀರ.
ನೀವು ಏನೇ ತುರ್ಕಿದ್ರು ಅರ್ಗುಸ್ಗೊಂಡಿದಿವಲ್ಲ ಥ್ಯಾಂಕ್ಸ್ ಹೇಳೋದ್ ಬಿಟ್ಟು ಬಾಯಿಗ್ ಬಂದಂಗ್ ಮಾತಾದ್ತೀರಲ್ರ್ತಿ..?
ಅಲ್ಲ ಜನ ಏನ್ ಮಾಡಿದ್ರು ಅಂತ ಕೇಳ್ತೀರಲ್ಲ ಇಲೆಕ್ಟ್ರೋನಿಕ್ ಮೀಡಿಯಾದವರು ಫ್ಯಾಶನ್ ಶೋ ತೊರ್ಸಿದಂಗೆ ನ್ಯೂಸ್ ತೋರ್ಸಕ್ಕೆ ಹೋದ್ರೆ ಜನ ಮತ್ತೇನ್ರಿ ಮಾಡ್ತಾರೆ ನೋಡ್ಕೊಂಡ್ ಕುರ್ತಾರೆ.
ನಿಮ್ದೆ ಮಾತಲ್ಲಿ ಹೇಳ್ಬೇಕು ಅಂದ್ರೆ ನಾಯಿ ಕಚ್ಚಿದರೂ ಸುದ್ದಿ ಮಾಡಿ ಕೊಡ್ತಿರಿ..
ಅಲ್ಲಾ ಸ್ವಾಮಿ ಮಾಲ್ ಅಂತ ಇದೆ ಅದು ಐಶಾರಾಮಕ್ಕಾಗೇ ಇರೋದು ಅದು ಇದು ಅಂತ ಬುರ್ಡೆ ಬಿಟ್ಟಿದ್ದು ನೀವೇ ಅಲ್ವೇನ್ರಿ ನೀವಲ್ದೆ ಮತ್ಯಾರ್ ಹೇಳ್ಕೊಡ್ತಾರೆ ಜನಕ್ಕೆ?
ಅದೆಲ್ಲ ಹೋಗ್ಲಿ ಚಾನೆಲ್ ವಿ ನಲ್ಲಿ ಮೊದಲು ಲವ್ ನೆಟ್ ಅಂತ ತೋರ್ಸಿದ್ರಿ ಆನ್ ಲೈನ್ ಚಾಟಿಂಗು ಅಂತ ಆಮೇಲೆ ಡೇರ್ ಟು ದೆಟ್ ಅಂದ್ರಿ ಕೊನೆಗೆ ಆಕ್ಸ್ ಯುವರ್ ಎಕ್ಸ್ ಅಂತೀರ ಹೇಳ್ರಿ ಯಾರು ನಮ್ಮನ್ನ ದಾರಿ ತಪ್ಪಿಸ್ತಾ ಇರೋವ್ರು?
ಇನ್ನು ಬಿಂದಾಸ್ ಅನ್ನೋ ಚಾನಲ್ ನಲ್ಲಿ ಎಮೋಶನಲ್ ಅತ್ಯಾಚಾರ್ ಅಂತ ತೋರ್ಸ್ತೀರಲ್ಲ ಅದೇನ್ ಕರ್ಮಾರಿ?
ನಂಬಿಕೆನ ಪರೀಕ್ಷೆಮಾಡೊದು ಅಂದ್ರೆ ಏನ್ರಿ ಅರ್ಥ?
ನಂಬ್ಕೆ ಇದೆ ಅಂದ್ಮೇಲೆ ಪರೀಕ್ಷೆ ಮಾಡ್ಬಾರ್ದು ಪರೀಕ್ಷೆ ಮಾಡ್ತಾರೆ ಅಂದ್ಮೇಲೆ ನಂಬಿಕೆ ಇರ್ಲೇಇಲ್ಲ ಅಂತ ಅಲ್ವೇನ್ರಿ ಅರ್ಥ?
ಯಾಕ್ ಸುಮ್ನೆ ನಿಮ್ ಟಿ ಆರ್ ಪಿ ಜಾಸ್ತಿ ಮಾಡ್ಕೊಳ್ಳೊಕೆ ಜನರ ಮನಸ್ಸು ಭಾವನೆಗಳ ಜೊತೆಗೆ ಆಟ ಆಡ್ತೀರಿ?
ಏನ್ ಪ್ರಯೋಜನ ಆಗುತ್ತೆ ಅದರಿಂದ ಬೇರೆಅವರ ಸಂಸಾರನ ಪ್ರಪಂಚದೆದ್ರಿಗೆ ಬತ್ತಲೆ ಮಾಡಿದ್ರೆ ನಿಮ್ಗಾಗೊ ಲಾಭ?
ಬರಿ ಟಿ ಆರ್ ಪಿ?
ಜನತೆಗೆ ಒಳ್ಳೆ ಸಂದೇಶ ತಲುಪೊ ವ್ಯವಸ್ಥೆ ಮಾಡ್ರಿ ಅದ್ಬಿಟ್ಟು ಯಾಕ್ ಅವ್ರಜೊತೆಗ್ ಆಟ ಆಟ ಕಟ್ತೀರಿ?
ಖಂಡಿತವಾಗಿಯೂ ನಾವು ಪಲಾಯನವಾದ ಮಾಡ್ತಿಲ್ಲ ನಿಮ್ಮ ನಿಲುವು ಏನು ಅಂತ ನಿಮ್ಗೇ ಧೃಢವಾಗಿಲ್ಲ ಇನ್ನು ನಾವೇನ್ರಿ ಮಾಡೋದು?
ಯಾರ ಪರವಾಗಿ ಹೊರಾಟ ಮಾಡ್ಬೆಕು ?
ವಿಜಯ ಕರ್ನಾಟಕದ ಪರವಾಗಾ ?
ಸಂಯುಕ್ತ ಕರ್ನಾಟಕದ ಪರವಾಗಾ ?
ಪ್ರಜಾವಾಣೀನಾ ಇಲ್ಲಾ ಉದಯವಾಣಿನಾ?
ಅಥವಾ ಇದ್ಯಾವ್ದು ಬೇಡಾ ಅಂತಾನೇ ಇಟ್ಕೊಳ್ಳಿ
ಹಾಯ್ ಬೆಂಗಳುರು?
ಲಂಕೇಶ್- ಗೌರಿ ಲಂಕೇಶ್?
ಅಗ್ನಿ?
ದುನಿಯಾ?
ಯಾವ್ಯಾವ್ದನ್ನ ನಂಬಬೇಕ್ರಿ ಜನಗಳು?
ಟಿವಿ ೯ ?
ಈ ಟೀವಿ?
ಉದಯ?
ಝೀ?
ಆಜ್ತಕ್ ?
ಬಿಬಿಸಿ?
ಸಿ ಎನ್ ಎನ್?
ಅಲ್ಲಾ ಸ್ವಾಮಿ ನೀವೇ ಹೇಳಿದಂಗೆ ಎಲ್ಲಾರಿಗೂ ಒಂದೊಂದು ಇಸಂ ಇದೆ ಜನಸಾಮಾನ್ಯರೆನ್ರಿ ಮಾಡ್ಬೇಕು?
ನಮಗೆ ಕೊನೆಗೂ ಉಳಿಯೋದು ಚಂದನ ನ್ಯಾಷನಲ್ ಮಾತ್ರ..
ಅದನ್ನೇ ನಂಬಬೇಕು ಅಂತಾದ್ರೆ ಬಾಕಿದು ಇದ್ದೆನ್ರಿ ಉಪಯೋಗ?
ನಮ್ಮವರಿಗೆ ಕನ್ಫುಶನ್ ಅನ್ನೋದನ್ನ ಕಲ್ಸಿದ್ದೆ ನೀವು.
ಯಾವ ಶಾಂಪು ತೊಗೋಬೇಕು ?
ಯಾವ ಫೋನ್ ತಗೋಬೇಕು?
ಯಾವ್ದಾದ್ರು ಕ್ಲಿಯರ್ ಆಗಿ ಸಲಹೆ ಕೊಡ್ತಿರೆನ್ರಿ?
ನಿಮಗೆ ಒಂದು ಸ್ಥಿರತೆ ಅನ್ನೋದೇ ಇಲ್ಲ ಇನ್ನು ನಮ್ಮೇಲೆ ಹರಿಹಾಯೋದ್ ಬೇರೆನಾ?
ನೀವು ಮೊದಲು ಒಂದು ತೀರ್ಮಾನಕ್ಕೆ ಬನ್ನಿ ಜನಕ್ಕೆ ಯಾವುದನ್ನ ಕೊಡಬೇಕು ಯಾವುದನ್ನ ಕೊಡಬಾರ್ದು ಅಂತ.
ಹೋಗ್ಲಿ ನೀವು ನಿಶ್ಪಕ್ಷಪಾತಿ ಅಂತ ಇರೋದನ್ನ ಹೇಳಿ ನಾನು ಅದನ್ನೇ ಹಿಂಬಾಲಿಸ್ತೀನಿ.
ಇವತ್ತಿನ ತನಕ ನಾನು ಯಾವುದೇ ಚಾನಲ್ ಅಥವಾ ಪೇಪರ್ ನಲ್ಲಿ ಬಂದ್ರೆ ಅದು ಸರಿನೊ ತಪ್ಪೋ ಅಂತ ರಾತ್ರಿ ಒಂಭತ್ತೂ ಇಪ್ಪತ್ತರ ನಂತರಾನೇ ತೀರ್ಮಾನ ಮಾಡೋದು ಯಾಕಂದ್ರೆ ಸಧ್ಯ ಪತ್ರಿಕೋದ್ಯಮದ ಮೂಲ ಮೌಲ್ಯ ಸ್ವಲ್ಪನಾದರೂ ಇದೆ ಅಂತ ಅನ್ಸೋದು ಚಂದನ ವಾರ್ತೆಯಂದ.
ಅಲ್ಲಾರಿ ಪತ್ರಿಕೋದ್ಯಮ ಮತ್ತೆ ಪತ್ರಕರ್ತರು ಅಂದ್ರೆ ಏನು ಅಂತ ವಿಶ್ವೇಶ್ವರ ಭಟ್ರ ಲೇಖನದಲ್ಲಿ ಮಾತ್ರ ಗೊತ್ತಾಗೊಂಗಾಯ್ತಲ್ರಿ ಜನಕ್ಕೆ..!!!
ಹಾಲು ಹೆಪ್ಪಾಗಿ ಮೊಸರಾಗಿ ಮಜ್ಜಿಗೆಯಾಗಿ ಬೆಣ್ಣೆಯಾಗಿ ತುಪ್ಪವಾಗಿ ನಮಗೆಲ್ಲ ಉಪಯೋಗಕ್ಕೆ ಬರಲಿ..
ಇನ್ನಾದ್ರು ಪತ್ರಿಕಾ ಸ್ವಾತಂತ್ರನ ನಿಜವಾದ ಅರ್ಥದಲ್ಲಿ ಉಳುಸ್ಗೊಳೊದಕ್ಕೆ ಪ್ರಯತ್ನ ಮಾಡಿ ಅಂತ ಒಬ್ಬ ಸಾಮಾನ್ಯ ಓದುಗನ ಸವಿನಯ ಕೋರಿಕೆ.
ನಿಮ್ಮ ಮತ್ತು ವಿನಾಯಕರ ಉತ್ತರದ ನಿರೀಕ್ಷೆಯಲ್ಲಿ ,
ಅಭಿಮಾನಿ
Very good writing... :)
ReplyDeleteYEAH ITS TRUE...PLEASE KEEP WRITING...........
ReplyDeletegood,keep writing
ReplyDeleteSuper Writing, keep it up.................
ReplyDeletewonderful adre workout agalla. sumne yake patrikodyamakke baitira? kal buda nodkoli amele munde nodbodante.
ReplyDelete