Thursday, November 15, 2012

ಹೋಗಮ್ಮ ಹೋಗೆ..!

ಮೊನ್ನೆ ನನ್ನ ದೋಸ್ತರೊಂದಿಗೆ ಕೂತು ಪಟ್ಟಂಗ ಹೊಡಿತಾ ಇದ್ದೆ,

ಬಹುಷಃ ಮೂರನೇ ಲಾರ್ಜ್ ಖಾಲಿ ಆಗಿ ನಾಲ್ಕನೇಯದ್ದರ ಬಗ್ಗೆ ಯೋಚನೆ ಮಾಡ್ತಾ ಇದ್ವಿ....

ಗೆಳೆಯ ಒಬ್ಬ ಹಾಡ ಹಾಕ್ತೀನಿ ಸ್ಟೆಪ್ ಹಾಕ್ಬೇಕು ಅಂತ ಭಯಂಕರ ಮೂಡ್ ಬಂದಿದೆ ಮಚ್ಚಾ ಅಂತ ಹೇಳಿದ,

ಪಾಪ ಮೊನ್ನೆ ತಾನೆ ಲೇಟೆಸ್ಟ್ ಬ್ರೇಕ್ ಅಪ್ ಆಗಿದ್ದಕ್ಕಾಗೋ ಏನೋ "ಮೋಸ ಮಾಡಲೆಂದೆ ನೀನು ಬಂದೆಯಾ" ಹಾಕಿದ್ದ...

ನಾವೆಲ್ಲ ಅವನು ಅಯ್ಯಯ್ಯೋ ಅನ್ನೋತನಕ ಹೊಡೆದಮೇಲೆ ಬೇರೆ ಹಾಡನ್ನ ಹಾಕಿದ...

ಆದರೆ ನಮ್ಮ ಮೂಡ್ ಹಾಳಾಗಿತ್ತು.....

ಎಲ್ಲಾ ತೀರ್ಥಂಕರರಂತೆ ನಾವೂ ಭಯಾನಕವಾಗಿ ಫಿಲಾಸಫಿ ಜಡಿತ ಶುರು ಹಚ್ಕೋಂಡು ನಾವು ಮಾಡ್ತಾ ಇರೋದು ತಪ್ಪಲ್ಲ ಯಾಕಂದ್ರೆ,

ಕುಡಿಯೋದು,ತಿನ್ನೋದು,ಹೊಗೆ ಬಿಡೋದ್ರಿಂದ ನಮ್ಮನ್ನ ಬಿಟ್ಟು ಬೇರೆ ಯಾರಿಗೂ ತೊಂದ್ರೆ ಆಗಲ್ಲ.

ಆದ್ರೆ ಕೆಲವರಿಗೆ ಇದಕ್ಕಿಂತ ಕೆಟ್ಟ ಚಟ ಇರುತ್ತೆ ಅವರು ಬೇರೆ ಅವರ ಜೀವನದ ಜೊತೆ ಆಟ ಆಡಿ ಅವರ ಜೀವನಾನ ಸಿಗರೇಟ್ ಆಶ್ ಕಿಂತ ಕಡೆ ಆಗೋಹಾಗೆ ಹಾಳ್ ಮಾಡ್ತಾರೆ,

ಇನ್ನು ಕೆಲವರು ಭಾವನೆ ಇನ್ನಂದು ಅಂತ ಮನಸ್ಸಿನ ಜೊತೆ ಆಟ ಆಡಿ ಮನಸ್ಸಿಗೆ ಲಿವರ್ ಕ್ಯಾನ್ಸರ್ ಗಿಂತ ದೊಡ್ದದಾದ ಮನಸ್ಸಿನ ಕ್ಯಾನ್ಸರ್ ಬರಿಸ್ತಾರೆ,

ಬರಿ ಪರ ಪರ ಅಂತ ಕೆರ್ಕೋಂಡ್ರೆ ಮಾತ್ರ ಗಾಯ ದೊಡ್ಡದಾಗಿ ನಾವು ಸಾಯೋದಲ್ಲ.......

ಬದಿಕಿದ್ದೂ ಇಲ್ದೆ ಇರೋ ತರ ಆಗ್ತೀವಲ್ಲ ಅದು ನಿಜವಾದ ಸಾವು......................


ನಾನು ಮಜಾ ಮಾಡ್ತಾನೇ ಸಾಯ್ಬೇಕು ಅಂತ ಡಿಸೈಡ್ ಮಾಡ್ಕೋಂಡು ಬದುಕ್ತಾ ಇರೋನು.

ಆದ್ರೆ ಬೇರೇವ್ರು ಯಾಕೆ ಆ ಲೆವೆಲ್ಲಿಗೆ ಪ್ರೀತಿ ಮಾಡ್ತಾರೋ ಗೊತ್ತಾಗಲ್ಲ...

ನನ್ನ ಪ್ರಕಾರ ಪ್ರತೀ ಸಲ ನಂಗೆ ನಿಜವಾದ ಪ್ರೀತಿ ಆಗುತ್ತೆ ಹಾಗಂತ ಬ್ರೇಕಪ್ಪೂ ಆಗುತ್ತೆ....

ನಾನು ಪ್ರೀತಿ ಮಾಡೋಷ್ಟೂ ದಿನ ಅವಳೇ ನನ್ ಪ್ರಾಣ ಆದ್ರೆ ಬಿಟ್ಟ ಮರುಕ್ಷಣ ಅವಳು ಒಳ್ಳೆ ಹುಡುಗಿ ಅಷ್ಟೇ!

ಯಾಕೆ ರಿಯಾಲಿಟಿ ಅರ್ಥ ಆದ್ರೂ ಆಗ್ದಿರೋ ಥರ ನಮ್ಗೇ ನಾವು ಮೊಸ ಮಾಡ್ಕೋಬೇಕು ಹೇಳಿ.??

ಸುಮ್ನೆ ಅವಳ ನೆನಪಾಗುತ್ತೆ ಅದೂ ಇದೂ ಅಂತ ಅಳ್ತಾ ಇರೋದಿಕ್ಕಿಂತ ಹೊಸ ಹಕ್ಕಿ ಹುಡ್ಕೋದ್ ಒಳ್ಳೇದು....

 ಕೋಗಿಲೆ ಮತ್ತೆ ಹಾಡೇ ಹಾಡತ್ತೇ...


Guys go find a new bird instead of crying in front of some bitch who doesn't care about you any more.
Don't force her to say ass hole in the same mouth which she said I LOVE YOU!







Wednesday, July 18, 2012

ಇಂಧನ ತೀರಿತು..!!

ಇಂಧನ ತೀರಿತು..




ಒಂಭತ್ತು ತಿಂಗಳು ಹೊರುವ ಒಂಭತ್ತು ನಿಮಿಷ ಹೆರುವ ನೋವನ್ನೂ ಕೊಡದೇ ಮಗನಾಗಿದ್ದಕ್ಕೋ ಏನೋ......

 ನನ್ನ ಜೀವನದ ಬಹುಮುಖ್ಯ ಪ್ರೀತಿಯ ಸೆಲೆ ಬತ್ತಿಹೋಯಿತು....

ಅಲ್ಲಲ್ಲ ನಾನೇ ಬತ್ತಿಸಿದೆ.,

ನನಗೆ ಅತೀ ಇಷ್ಟವಾಗುವ ಸ್ಥಳ ನನ್ನ ಅಮ್ಮನ ಮಡಿಲು..

ಅದೆಷ್ಟೋ ಸಲ ಅದರಲ್ಲಿ ಮಲಗಿ ಕೇಳಿದ್ದೆ ನನ್ನಮ್ಮ ನನ್ನ ಬಿಟ್ಟು ಎಲ್ಲೂ ಹೋಗಲ್ಲ ಅಲ್ವಾ ಅಂತ........

ಪ್ರತೀ ಸಲ ಬಂದ ಉತ್ತರ ನಾವೆಲ್ಲೂ ಹೋಗಲ್ಲ ನೀನು ಇರಬೇಕು ಅಷ್ಟೆ??



ಯಾಕೋ ಇಲ್ಲಿ' ಅಮ್ಮಾ ನಿನ್ನ ಎದೆಯಾಳದಲ್ಲಿ' ಹಾಡಿನ ಸಾಲುಗಳು ನೆನಪಾಗ್ತಿವೆ,



"ಅಮ್ಮಾ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕಾ ಮೀನು

ಮಿಡುಕಾಡುತಿರುವೆ ನಾನು

ಕಡಿಯಲೊಲ್ಲೆ ನೀ ಕರುಳ ಬಳ್ಳಿ, ಒಲವೂಡುತಿರುವಾ ತಾಯೇ,

ಬಿಡದಾ ಭುವಿಯಾ ಮಾಯೆ".



ರಥಿಕ ಮಾಯೆಗೆ ಬಲಿಯಾಗಿ ರಥ ಅಪಘಾತಕ್ಕೆ ಈಡಾಗುವಂತೆ ನಾನೂ ಮಾಯೆಗೆ ಬಲಿಯಾಗಿ ನನ್ನ ಜೀವನ ರಥದ ಎರಡು ಗಾಲಿಗಳನ್ನೇ ಕಳೆದುಕೊಂಡೆ..

ಅದು ನನ್ನಮ್ಮನ ಪ್ರೀತಿ ಮತ್ತು ಸಾನಿಧ್ಯ.



"ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ?

ದೂಡು ಹೊರಗೆ ನನ್ನ,

ಓಟ ಕಲಿವೆ, ಒಳನೋಟ ಕಲಿವೆ

ನಾ ಕಲಿವೆ ಊರ್ಧ್ವಗಮನ

ಓ ಅಗಾಧ ಗಗನ"



ನಾನು ಅಮ್ಮನ ಗೂಡುಬಿಟ್ಟು ಹೊರಗೆ ಪ್ರಪಂಚ ನೋಡಬೇಕು ಅಂತ ಬಂದೆ,

ನನ್ನ ಮನಸ್ಸಿನ ಹುಚ್ಚು ಓಟ ನಿಯಂತ್ರಿಸಲಾಗಲಿಲ್ಲ, ಒಳನೋಟದ ಅರ್ಥ ಕಾಣಲೇ ಇಲ್ಲ.

ಅಗಾಧ ಪ್ರಪಂಚದ ತಗಾದೆ ವಿಷಯಗಳಿಗೆಲ್ಲ ವಸ್ತುವಾದೆ.

ನನ್ನ ನೆಲೆ ಬಿಟ್ಟು ಹಾರಿ ಆಗಿತ್ತು.





" ಮೇಲೆ ಹಾರಿ ನಿನ್ನ ಸೆಳೆತ ಮೀರಿ

ನಿರ್ಭಾರ ಸ್ಥಿತಿಗೆ ತಲುಪಿ

ಬ್ರಹ್ಮಾಂಡವನ್ನೇ ಬೆದಕಿ

ಇಂಧನ ತೀರಲು ಬಂದೇ ಬರುವೆನು

ಮತ್ತೇ ನಿನ್ನ ತೊಡೆಗೇ

ಮೂರ್ತ ಪ್ರೇಮದೆಡೆಗೆ"



ನಿರ್ಭಾರ ಸ್ಥಿತಿಯ ಅರಿವು ನನಗಿಲ್ಲ ಆದರೆ ನಿರ್ಭಾವುಕನಾಗಿರಲು ಯತ್ನಿಸುತ್ತಿದ್ದೇನೆ..

ಇಂಧನ ಯಾವತ್ತೋ ತೀರಿ ಹೋಗಿದೆ

ಅಮ್ಮನ ಮಡಿಲಲ್ಲಂತೂ ಜಾಗವಿಲ್ಲ....

ಮನದಲ್ಲಿ????????

ಗೊತ್ತಿಲ್ಲ.............!